ಅಮಿತಾಬ್ ಬಚ್ಚನ್ ಹಾಗೂ ಸನ್ನಿಲಿಯೋನ್ ಒಂದೇ ಅಪಾರ್ಟ್​ಮೆಂಟ್​ನ ನೆರೆಹೊರೆಯವರು; ಕೋಟಿಕೋಟಿಯ ಫ್ಲ್ಯಾಟ್ ಖರೀದಿ

Real estate: ಮುಂಬೈನಲ್ಲಿ ಇನ್ನೂ ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ ಪ್ರಾಜೆಕ್ಟ್​ನಲ್ಲಿ ಹಿಂದಿ ಚಿತ್ರ ನಟ ಅಮಿತಾಬ್​ ಬಚ್ಚನ್ ರೂ. 31 ಕೋಟಿಗೆ ಫ್ಲ್ಯಾಟ್ ಖರೀದಿಸಿದ್ದಾರೆ. ಅದೇ ಪ್ರಾಜೆಕ್ಟ್​​ನಲ್ಲಿ ಸನ್ನಿಲಿಯೋನ್ ಕೂಡ ಫ್ಲ್ಯಾಟ್ ಕೊಂಡಿದ್ದಾರೆ.

Follow us
Srinivas Mata
|

Updated on:May 28, 2021 | 1:37 PM

ಟಯರ್- 2 ಕಟ್ಟಡ ನಿರ್ಮಾತೃ ಕ್ರಿಸ್ಟಲ್​ ಗ್ರೂಪ್​ನ ಅಟ್ಲಾಂಟಿಸ್​ ಪ್ರಾಜೆಕ್ಟ್​ನಲ್ಲಿ ಚಿತ್ರನಟ ಅಮಿತಾಬ್ ಬಚ್ಚನ್ ಅವರು 5,84 ಚದರಡಿಯ ಡೂಪ್ಲೆಕ್ಸ್ ಫ್ಲ್ಯಾಟ್ ಆಸ್ತಿಯನ್ನು ರೂ. 31 ಕೋಟಿಗೆ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ಖರೀದಿ ಮಾಡಿರುವ ಈ ಫ್ಲ್ಯಾಟ್​ ವ್ಯವಹಾರಕ್ಕೆ ಸಂಬಂಧಿಸಿದ ನೋಂದಣಿ ದಾಖಲಾತಿಗಳ ಮಾಹಿತಿ Zapkey.comಗೆ ದೊರೆತಿದೆ. ಈ ಆಸ್ತಿಯನ್ನು ಅಮಿತಾಬ್ ಬಚ್ಚನ್ 2020ರ ಡಿಸೆಂಬರ್​ನಲ್ಲಿ ಖರೀದಿ ಮಾಡಿದ್ದು, 2021ರ ಏಪ್ರಿಲ್​ನಲ್ಲಿ ನೋಂದಣಿ ಆಗಿದೆ. 31 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಶೇ 2ರಂತೆ 62 ಲಕ್ಷ ರೂಪಾಯಿಯ ಮುದ್ರಾಂಕ ಶುಲ್ಕ (ಸ್ಟ್ಯಾಂಪ್ ಡ್ಯೂಟಿ) ಕೂಡ ಭರಿಸಿದ್ದಾರೆ. ಈ ಆಸ್ತಿ ಖರೀದಿಯ ಮೌಲ್ಯದ ಲೆಕ್ಕ ನೋಡಿದರೆ, ಚದರಡಿಗೆ ರೂ. 60,000 ಆಗುತ್ತದೆ. ಆರು ಕಾರು ಪಾರ್ಕ್ ಜಾಗ, 27 ಹಾಗೂ 28ನೇ ಅಂತಸ್ತಿನಲ್ಲಿ ಈ ಆಸ್ತಿ ಇದೆ. ಮನಿಕಂಟ್ರೋಲ್ ವೆಬ್​ಸೈಟ್​ನಿಂದಲೂ ಈ ಆಸ್ತಿ ನೋಂದಣಿ ದಾಖಲೆ ಕಾಪಿಯನ್ನು ಪರಿಶೀಲಿಸಲಾಗಿದೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವಿಲಾಸಿ ಅಪಾರ್ಟ್​ಮೆಂಟ್​ಗಳ ಮಾರಾಟಕ್ಕೆ ಉತ್ತೇಜನ ಸಿಕ್ಕಿದೆ. ಸೆಲೆಬ್ರಿಟಿಗಳು, ಉದ್ಯಮಿಗಳು, ವೃತ್ತಿಪರರು ಈಗಿನ ಬೆಲೆ ಇಳಿಕೆ ಸಂದರ್ಭದ ಲಾಭ ಪಡೆಯುವುದಕ್ಕೆ ಮುಂದಾಗಿದ್ದಾರೆ. ಜತೆಗೆ ಕೆಲವು ರಾಜ್ಯಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನೂ ಇಳಿಸಲಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮಹಾರಾಷ್ಟ್ರ ಸರ್ಕಾರವು ಮುದ್ರಾಂಕ ಶುಲ್ಕವನ್ನು ಡಿಸೆಂಬರ್ 31, 2020ರ ತನಕ ಶೇ 5ರಿಂದ ಶೇ 2ಕ್ಕೆ ತಾತ್ಕಾಲಿಕವಾಗಿ ಇಳಿಸಿತ್ತು. ಆ ನಂತರ 2021ರ ಜನವರಿಯಿಂದ ಮಾರ್ಚ್​ ತನಕ ಶೇ 3ಕ್ಕೆ ತಂದಿತು. ಆ ನಂತರ ವಿಸ್ತರಣೆ ಮಾಡದಿರುವುದಕ್ಕೆ ನಿರ್ಧರಿಸಿ, 2021- 22ರ ಸಾಲಿಗೆ ಸಿದ್ಧಪಡಿಸಿದ ದರವನ್ನು ಬದಲಾಯಿಸದೆ ಹಾಗೇ ಇಡುವುದಕ್ಕೆ ತೀರ್ಮಾನಿಸಿತು.

Sunny Leone

ಸನ್ನಿ ಲಿಯೋನ್ (ಸಂಗ್ರಹ ಚಿತ್ರ)

ಇದೇ ಪ್ರಾಜೆಕ್ಟ್​ನಲ್ಲಿ ನಟಿ ಸನ್ನಿ ಲಿಯೋನ್ ಕೂಡ ಖರೀದಿ ಮಾಡಿದ್ದಾರೆ. ಅವರು ಖರೀದಿ ಮಾಡಿದ ಆಸ್ತಿ ಮೌಲ್ಯ ರೂ. 16 ಕೋಟಿ. ಮಾರ್ಚ್ 28, 2021ಕ್ಕೆ ಕೊಂಡಿದ್ದಾರೆ. ಅಂದಹಾಗೆ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಆನಂದ್ ಎಲ್. ರಾಯ್ ಕೂಡ ಇದೇ ಪ್ರಾಜೆಕ್ಟ್​ನಲ್ಲಿ ಡೂಪ್ಲೆಕ್ಸ್ ಅಪಾರ್ಟ್​ಮೆಂಟ್ ಖರೀದಿಸಿದ್ದಾರೆ. ಪತಿ-ಪತ್ನಿ ಹೆಸರಲ್ಲಿ ಅಪಾರ್ಟ್​ಮೆಂಟ್​ನಲ್ಲಿ ರೂ. 25.3 ಕೋಟಿಗೆ ಕೊಂಡಿದ್ದಾರೆ. ಈ ಡೂಪ್ಲೆಕ್ಸ್ 27 ಮತ್ತು 28ನೇ ಅಂತಸ್ತಿನಲ್ಲಿ ಇದ್ದು, ಒಟ್ಟು 5,761 ಚದರಡಿಯ ಜಾಗ, ಜತೆಗೆ 5 ಕಾರು ನಿಲ್ಲಿಸುವಷ್ಟು ಜಾಗ ಬರುತ್ತದೆ. ಮಾರ್ಚ್ 8, 2021ರಲ್ಲಿ ನೋಂದಣಿ ಆಗಿದ್ದು, ರೂ. 75.9 ಲಕ್ಷ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ. ಕ್ರಿಸ್ಟಲ್ ಪ್ರೈಡ್​ ಡೆವಲಪರ್ಸ್​ನ ಈ ಅಟ್ಲಾಂಟಿಸ್ ಪ್ರಾಜೆಕ್ಟ್ ಇನ್ನೂ ನಿರ್ಮಾಣ ಹಂತದಲ್ಲಿದೆ. ಕೇವಲ 34 ಅಪಾರ್ಟ್​ಮೆಂಟ್​ಗಳು ಮಾತ್ರ ಇವೆ. ಹೆಚ್ಚಿನ ದಟ್ಟಣೆ ಇಲ್ಲದ ಹೌಸಿಂಗ್ ಪ್ರಾಜೆಕ್ಟ್ ಇದಾಗಿದೆ. ​

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ

(Bollywood stars Amitabh Bachchan and Sunny Leone purchased crores of rupees woth of flats in Mumbai)

Published On - 1:26 pm, Fri, 28 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ