ಸರ್ಕಾರೀ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಹೀಯಾಳಿಸುವುದು ಸಚಿವ ಕೆ ಎನ್ ರಾಜಣ್ಣ ಘನತೆಗೆ ತಕ್ಕುದಲ್ಲ

ಸರ್ಕಾರೀ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಹೀಯಾಳಿಸುವುದು ಸಚಿವ ಕೆ ಎನ್ ರಾಜಣ್ಣ ಘನತೆಗೆ ತಕ್ಕುದಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2023 | 3:58 PM

Independence Day 2023: ಮಿನಿಸ್ಟ್ರು ಸಹ ಆಫ್ ಕೋರ್ಸ್ ವಿದ್ಯಾವಂತರೇ, ಅದರಲ್ಲೇನೂ ಡೌಟಿಲ್ಲ. ಹಾಸನನಲ್ಲಿ ದ್ವಜಾರೋಹಣ ಮಾಡುವ ಮೊದಲು ಅವರು ನೀಲಿವರ್ಣದ ಟ್ರೌಸರ್ ಮತ್ತು ಶ್ವೇತವರ್ಣದ ಶರ್ಟ್ ಧರಿಸಿ ಕಡು ನೀಲಿ ಬಣ್ಣದ ಟೈ ಬಿಗಿದುಕೊಂಡು ಅಧಿಕಾರಿಗಳ ಜೊತೆ ಆಂಗ್ಲ ಭಾಷೆಯಲ್ಲಿ ಮಾತಾಡುವುದನ್ನು ನೀವು ನೋಡಬಹುದು.

ಹಾಸನ: ಸಹಕಾರ ಸಚಿವ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮಾತಾಡುವಾಗ ಅದರಲ್ಲೂ ವಿಶೇಷವಾಗಿ ಅಧಿಕಾರಿಗಳ ಕುರಿತು ಮಾತಾಡುವಾಗ ನಾಲಿಗೆ ಹರಿಬಿಟ್ಟ ಹಲವು ಪ್ರಸಂಗಗಳನ್ನು ನಾವು ವರದಿ ಮಾಡಿದ್ದೇವೆ. ಮಿನಿಸ್ಟ್ರು ಸಹ ಆಫ್ ಕೋರ್ಸ್ ವಿದ್ಯಾವಂತರೇ, ಅದರಲ್ಲೇನೂ ಡೌಟಿಲ್ಲ. ಹಾಸನನಲ್ಲಿ ದ್ವಜಾರೋಹಣ ಮಾಡುವ ಮೊದಲು ಅವರು ನೀಲಿವರ್ಣದ ಟ್ರೌಸರ್ ಮತ್ತು ಶ್ವೇತವರ್ಣದ ಶರ್ಟ್ ಧರಿಸಿ ಕಡು ನೀಲಿ ಬಣ್ಣದ ಟೈ ಬಿಗಿದುಕೊಂಡು ಅಧಿಕಾರಿಗಳ ಜೊತೆ ಆಂಗ್ಲ ಭಾಷೆಯಲ್ಲಿ ಮಾತಾಡುವುದನ್ನು ನೀವು ನೋಡಬಹುದು. ವಿಷಯ ಅಷ್ಟೇ ಆಗಿದ್ದರೆ ಯಾರದ್ದೂ ತಕರಾರಿರುತ್ತಿರಲಿಲ್ಲ. ಆದರೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಬಗ್ಗೆ ಮಾತಾಡುವಾಗ, ಅವರು; ಅವನೆಲ್ಲಿ, ನೀವೆಲ್ಲ ಕೆಲಸ ಮಾಡುತ್ತಿದ್ದರೆ, ಅವನು ದೆವ್ವದ ಹಾಗೆ ಕೂತಿರ್ತಾನೆ ಅನ್ನುತ್ತಾರೆ. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಧಿಕಾರ ಸಚಿವರಿಗೆ ಇದೆ, ಅದರೆ ಬೇರೆ ಅಧಿಕಾರಿಗಳ ಮುಂದೆ ಇನ್ನೊಬ್ಬ ಅಧಿಕಾರಿಯನ್ನು ಅದೂ ಆ ನಿರ್ದಿಷ್ಟ ಅಧಿಕಾರಿಯ ಅನುಪಸ್ಥಿತಿಯಲ್ಲಿ ಹೀಗೆ ಹೀಯಾಳಿಸುವುದು ಸಚಿವರ ಘನತೆಗೆ ತಕ್ಕುದಲ್ಲ. ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವರ್ತನೆಯೂ ಹೀಗಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ