ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ರಾಷ್ಟ್ರಧ್ವಜದಲ್ಲಿನ ಬಣ್ಣಗಳ ಬಗ್ಗೆ ಗೊತ್ತಿಲ್ಲದಿರುವುದು ದುರಂತ: ಕೆ ಎಸ್ ಈಶ್ವರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2022 | 4:33 PM

ಜನಸಾಮಾನ್ಯರಿಗೆ ತಿರಂಗದಲ್ಲಿನ ಪ್ರಮಾದಗಳು ಅರ್ಥವಾಗುತ್ತಿವೆ ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ರಾಷ್ಟ್ರಧ್ವಜದಲ್ಲಿನ ಬಣ್ಣಗಳ ಬಗ್ಗೆ ಗೊತ್ತಿಲ್ಲದಿರುವುದು ದುರಂತ ಎಂದರು.

ಶಿವಮೊಗ್ಗ: ಶನಿವಾರ ಶಿವಮೊಗ್ಗದಲ್ಲಿ ಅಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು (KS Eshwarappa), ಹರ್ ಘರ್ ತಿರಂಗಾ ಅಭಿಯಾನದಡಿ ನಗರದಲ್ಲಿ ಪ್ರತಿ ಮನೆಗೆ ರಾಷ್ಟ್ರಧ್ವಜ (National Flag) ತಲುಪಿಸುವ ಕೆಲಸ ಜಾರಿಯಲ್ಲಿದೆ ಎಂದು ಹೇಳಿದರು. ರಾಷ್ಟ್ರಧ್ವಜಗಳ ತಯಾರಿಕೆಯಲ್ಲಿ ಉಂಟಾಗಿರುವ ಕೆಲವು ಪ್ರಮಾದಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದ ಅವರು ಜನಸಾಮಾನ್ಯರಿಗೆ ತಿರಂಗದಲ್ಲಿನ ಪ್ರಮಾದಗಳು ಅರ್ಥವಾಗುತ್ತಿವೆ ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ (Siddaramaiah) ರಾಷ್ಟ್ರಧ್ವಜದಲ್ಲಿನ ಬಣ್ಣಗಳ ಬಗ್ಗೆ ಗೊತ್ತಿಲ್ಲದಿರುವುದು ದುರಂತ ಎಂದರು.