ಒಂದು ಅಧಿವೇಶನ ಮುಗಿದರೂ ರಾಷ್ಟ್ರೀಯ ಪಕ್ಷ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ದುರಂತ: ಲಕ್ಷ್ಮಣ ಸವದಿ

|

Updated on: Jul 31, 2023 | 1:36 PM

ಗೆಳೆತನ ಮತ್ತು ಪಕ್ಷ ನಿಷ್ಠೆ ಎರಡು ಭಿನ್ನ ಆಯಾಮಗಳು, ಸಿಟಿ ರವಿ ಪಕ್ಷದಲ್ಲಿ ಬೆಳೆಯುತ್ತಿದ್ದಾರೆ, ಒಬ್ಬ ಸ್ನೇಹಿತನಾಗಿ ಅವರ ಬೆಳವಣಿಗೆ ಕಂಡು ಸಂತೋಷಪಡುತ್ತೇನೆ ಎಂದು ಸವದಿ ಹೇಳಿದರು.

ಬೆಳಗಾವಿ: ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿಯ ಸ್ಥಳೀಯ ವರದಿಗಾರನೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Santosh), 16ನೇ ವಿಧಾನ ಸಭೆ ರಚನೆಯಾಗಿ ಒಂದು ಅಧಿವೇಶನ ಮುಗಿದರೂ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು (Leader of Opposition) ಆಯ್ಕೆ ಮಾಡಲು ಸಾಧ್ಯವಾಗದಿರೋದು ದುರಂತದ ವಿಷಯ ಅಂತ ಹೇಳಿದರು. ಬಿಜೆಪಿ ಪ್ರತಿ ವರ್ಷ ಒಂದು ಹೊಸ ಇತಿಹಾಸವನ್ನು ಬರೆಯುತ್ತಿದೆ ಎಂದು ಸವದಿ ಗೇಲಿಮಾಡಿದರು. ಸಿಟಿ ರವಿಯವರನ್ನು (CT Ravi) ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರವಿ ತನ್ನ ಸ್ನೇಹಿತ ನಿಜ; ಆದರೆ ಗೆಳೆತನ ಮತ್ತು ಪಕ್ಷ ನಿಷ್ಠೆ ಎರಡು ಭಿನ್ನ ಆಯಾಮಗಳು, ಅವರು ಪಕ್ಷದಲ್ಲಿ ಬೆಳೆಯುತ್ತಿದ್ದಾರೆ, ಒಬ್ಬ ಸ್ನೇಹಿತನಾಗಿ ಅವರ ಬೆಳವಣಿಗೆ ಕಂಡು ಸಂತೋಷಪಡುತ್ತೇನೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ