ಬೆಥೆಲ್ ಸ್ಪಿನ್ಗೆ ‘ತಿರುಗಿ’ ಬಿದ್ದ ಶ್ರೀಲಂಕಾ
Sri Lanka vs England, 3rd T20I: ಶ್ರೀಲಂಕಾ ತಂಡವು 19.3 ಓವರ್ಗಳಲ್ಲಿ 116 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಆದರೆ ಈ ಬಾರಿ ಗೆದ್ದಿರುವುದು ಕೇವಲ 12 ರನ್ಗಳ ಅಂತರದಿಂದ. ಈ ಗೆಲುವಿನ ರೂವಾರಿ ಜೇಕಬ್ ಬೆಥೆಲ್. ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 128 ರನ್ಗಳು ಮಾತ್ರ.
129 ರನ್ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 15 ಓವರ್ಗಳಲ್ಲಿ 97 ರನ್ ಕಲೆಹಾಕಿದ್ದರು. ಈ ಹಂತದಲ್ಲಿ ದಾಳಿಗಿಳಿದ ಜೇಕಬ್ ಬೆಥೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
ಅಂತಿಮ ಹಂತದಲ್ಲಿ 3.3 ಓವರ್ಗಳನ್ನು ಎಸೆದ ಬೆಥೆಲ್ ಕೇವಲ 11 ರನ್ ನೀಡಿ 4 ವಿಕೆಟ್ ಉರುಳಿಸಿದರು. ಪರಿಣಾಮ ಶ್ರೀಲಂಕಾ ತಂಡವು 19.3 ಓವರ್ಗಳಲ್ಲಿ 116 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

