ಕಾಂಗ್ರೆಸ್ ಸೇರಿದಾಗ ಜಗದೀಶ್ ಶೆಟ್ಟರ್ ಬಿಜೆಪಿ ಬಗ್ಗೆ ಏನೇನು ಹೇಳಿದ್ದರು ಗೊತ್ತಾ? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Apr 12, 2025 | 8:04 PM

ಜಾತಿಗಣತಿ ವರದಿ ಯಾವಾಗ ಬಿಡುಗಡೆ ಮಾಡುತ್ತೀರಿ ಅಂತ ಕೇಳಿದಾಗ ಸಿದ್ದರಾಮಯ್ಯ ಅದರ ಇತಿಹಾಸದ ಬಗ್ಗೆ ಹೇಳಿದರು. ಜಾತಿಗಣತಿ ನಮ್ಮ ಪ್ರಣಾಳಿಕೆಯಲ್ಲಿದೆ, ಅದನ್ನು ಮಾಡೇ ಮಾಡ್ತೀವಿ, ನ್ಯಾಯಾಲಯಗಳು ಎಂಪಿರಕಲ್ ಡಾಟಾವನ್ನು ಕೇಳುತ್ತವೆ, ಕುಟುಂಬವೊಂದರ ಸ್ವಾತಂತ್ರ್ಯ ಪೂರ್ವ ಮತ್ತು ಈಗಿನ ಸ್ಥಿತಿಯಲ್ಲಿ ಅಗಿರುವ ಬದಲಾವಣೆ ಅರ್ಥಮಾಡಿಕೊಳ್ಳಲು ಜಾತಿಗಣತಿ ಬೇಕೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ, ಏಪ್ರಿಲ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ದಿನಗಳ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ಸ್ಥಳೀಯ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಜಾತಿಗಣತಿ ಬಗ್ಗೆ ಮಾಡಿರುವ ಕಾಮೆಂಟ್​​ಗೆ ಅವರು ನಗುತ್ತಾ, ಶೆಟ್ಟರ್ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಎರಡು ಸ್ಥಾನಗಳಿಗೂ ಅವರು ಅಸಮರ್ಥರಾಗಿದ್ದರು, ಬಿಜೆಪಿ ಟಿಕೆಟ್ ಕೊಡದೆ ಹೋದಾಗ ಕಾಂಗ್ರೆಸ್​ಗೆ ಬಂದು ಎಮ್ಮೆಲ್ಸಿಯಾಗಿ ಮಜಾ ಮಾಡಿದರು, ನಂತರ ವಾಪಸ್ಸು ಹೋಗಿ ಬಿಜೆಪಿ ಸೇರಿಕೊಂಡರು, ಅವರು ಕಾಂಗ್ರೆಸ್​​ಗೆ ಬಂದಾಗ ಬಿಜೆಪಿ ಬಗ್ಗೆ ಏನೇನು ಹೇಳಿದ್ದರು ಅಂತ ಹೇಳ್ಲಾ? ಬೇಡ ಅದನ್ನೆಲ್ಲ ಹೇಳಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ರಾಜಣ್ಣ ಹಾಗೂ ಸುರೇಶ್ ಜೊತೆ ಆರ್​ಸಿಬಿ ಮತ್ತು ಡಿಸಿ ನಡುವಿನ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.