Loading video

ಅಣ್ಣ ಎಂದು ಅಳುತ್ತಾ ಕೂಗಿದ ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ

|

Updated on: Feb 18, 2025 | 9:53 PM

ವಿಜಯವಾಡದಲ್ಲಿ ಭಾವುಕಳಾದ ಪುಟ್ಟ ಬಾಲಕಿಯೊಬ್ಬಳು ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಅಣ್ಣ ಎಂದು ಕೂಗಿದ್ದಾಳೆ. ಅಪಾರ ಜನಸಂದಣಿಯ ನಡುವೆಯೂ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಆಕೆಯನ್ನು ಅಪ್ಪಿಕೊಂಡು, ಮುತ್ತಿಕ್ಕಿ ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜಗನ್ ಮೋಹನ್ ರೆಡ್ಡಿ ಆ ಹುಡುಗಿಯನ್ನು ಗಮನಿಸಿ ಭೇಟಿಯಾಗುವುದನ್ನು ವೀಡಿಯೊದಲ್ಲಿ ಕಾಣಬಹುದು.

ವಿಜಯವಾಡ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಭಿಮಾನಿಯಾಗಿರುವ ಪುಟ್ಟ ಬಾಲಕಿಯೊಬ್ಬಳು ಇಂದು ವಿಜಯವಾಡದಲ್ಲಿ ಭಾರಿ ಜನಸಂದಣಿಯ ನಡುವೆ ಅಳುತ್ತಾ ಮಾಜಿ ಸಿಎಂ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಣ್ಣ ಎಂದು ಅಳುತ್ತಾ ಭೇಟಿಯಾಗಲು ತವಕಿಸುತ್ತಿದ್ದ ಆಕೆಯನ್ನು ಗಮನಿಸಿದ ಜಗನ್ ಮೋಹನ್ ರೆಡ್ಡಿ ಆಕೆಯನ್ನು ಎತ್ತಿಕೊಂಡು, ಅಪ್ಪಿಕೊಂಡು, ಮುತ್ತನ್ನಿಟ್ಟು, ಸೆಲ್ಫಿಗೂ ಪೋಸ್ ಕೊಟ್ಟಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ