ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು

Updated on: Sep 24, 2023 | 10:15 PM

Jaggesh: ತಮ್ಮ ಸಹನಟ, ಒಟ್ಟಿಗೆ ನಟಿಸಿ ಕನ್ನಡ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿರುವ ಜೋಡಿ ಜಗ್ಗೇಶ್-ದತ್ತಣ್ಣ ಜೋಡಿ. ಸಹ ನಟ ದತ್ತಣ್ಣ ಅವರ ಅಭಿನಯ ಪ್ರತಿಭೆ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ನಟ ದತ್ತಣ್ಣ (Dattanna) ಹಾಗೂ ಜಗ್ಗೇಶ್ (Jaggesh)​ ಜೋಡಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ‘ನೀರ್ ದೋಸೆ’ ಸಿನಿಮಾದಲ್ಲಿನ ಇವರಿಬ್ಬರ ನಟನೆ, ಪರಸ್ಪರ ಕೆಮಿಸ್ಟ್ರಿ ಸಿನಿಮಾ ಪ್ರೇಕ್ಷಕರನ್ನು ನಕ್ಕು ನಲಿಸಿದೆ. ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಜಗ್ಗೇಶ್ ನಟನೆಯ ‘ತೋತಾಪುರಿ2’ ಸಿನಿಮಾದಲ್ಲಿ ದತ್ತಣ್ಣ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಮ್ಮೆ ಜಗ್ಗೇಶ್ ಜೊತೆ ಸೇರಿ ನಗುವಿನ ಹೊನಲು ಹರಿಸಲು ರೆಡಿಯಾಗಿದ್ದಾರೆ. ದತ್ತಣ್ಣ ಮುಸ್ಲಿಂ ಪಾತ್ರಧಾರಿಯಾಗಿ ನಟಿಸಿರುವ ಬಗ್ಗೆ ನಟ ಜಗ್ಗೇಶ್ ಹೆಮ್ಮೆಯಿಂದ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More