ರಾಘವೇಂದ್ರ ಸ್ಟೋರ್ಸ್ ಬಹಳ ಕಷ್ಟದ ಸಿನಿಮಾ: ಹೀಗ್ಯಾಕಂದರು ದತ್ತಣ್ಣ?
Raghavendra Stores: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಯಶಸ್ಸನ್ನು ಚಿತ್ರತಂಡ ಸಂಭ್ರಮಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿರುವ ಹಿರಿಯ ನಟ ದತ್ತಣ್ಣ, ರಾಘವೇಂದ್ರ ಸ್ಟೋರ್ಸ್ ಬಹಳ ಕಷ್ಟದ ಸಿನಿಮಾ ಎಂದಿದ್ದಾರೆ.
ಜಗ್ಗೇಶ್ (Jaggesh) ಪ್ರಧಾನ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ಸ್ಟೋರ್ಸ್ (Raghavenra Stores) ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಯಶಸ್ಸು ಸಂಭ್ರಮಿಸಲು ಚಿತ್ರತಂಡ ನಿನ್ನೆ ಸಕ್ಸಸ್ ಮಿಟ್ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಿನಿಮಾದಲ್ಲಿ ನಟಿಸಿದ ಹಲವು ನಟರು ಭಾಗವಹಿಸಿದ್ದರು. ಜಗ್ಗೇಶ್ರ ತಂದೆ ಪಾತ್ರದಲ್ಲಿ ನಟಿಸಿರುವ ದತ್ತಣ್ಣ (Dattanna), ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಗ್ಗೆ ಮಾತನಾಡುತ್ತಾ, ಇದು ಬಹಳ ಕಷ್ಟದ ಸಿನಿಮಾ ಎಂದು ವಿಶ್ಲೇಷಿಸಿದರು. ಜೊತೆಗೆ ಜಗ್ಗೇಶ್ ನಟನೆ ಬಗ್ಗೆ ತಾವು ಗಮನಿಸಿದ ಅಂಶಗಳನ್ನು ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 pm, Thu, 4 May 23