Dattanna: ‘ರಾಘವೇಂದ್ರ ಸ್ಟೋರ್ಸ್ ಬಹಳ ಕಷ್ಟವಾದ ಚಿತ್ರ’: ಸಕ್ಸಸ್ ಬಳಿಕ ತೆರೆ ಹಿಂದಿನ ವಿಷಯಗಳ ಬಗ್ಗೆ ದತ್ತಣ್ಣ ಮಾತು
Raghavendra Stores: ‘ರಾಘವೇಂದ್ರ ಸ್ಟೋರ್ಸ್ ಸಾಮಾನ್ಯ ಸಿನಿಮಾ ಅಲ್ಲ. ಇದರಲ್ಲಿ ಪ್ರತಿಪಾದಿಸಿರುವ ವಿಷಯದಲ್ಲಿ ಹೊಸತನ ಇದೆ’ ಎಂದು ನಟ ದತ್ತಣ್ಣ ಹೇಳಿದ್ದಾರೆ.
ಹಿರಿಯ ನಟ ದತ್ತಣ್ಣ (Dattanna) ಅವರು ಈಗಲೂ ಬಹುಬೇಡಿಕೆಯ ಕಲಾವಿದನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್ ಮೀಟ್ನಲ್ಲಿ ದತ್ತಣ್ಣ ಮಾತನಾಡಿದ್ದಾರೆ. ‘ಇದು ಸಾಮಾನ್ಯ ಸಿನಿಮಾ ಅಲ್ಲ. ಇದರಲ್ಲಿ ಪ್ರತಿಪಾದಿಸಿರುವ ವಿಷಯದಲ್ಲಿ ಹೊಸತನ ಇದೆ. ನಿರ್ದೇಶಕರು ಯಾಕೆ ಇಂಥ ವಿಷಯ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ನನಗೆ ಕುತೂಹಲ ಇದೆ. ಜಗ್ಗೇಶ್ (Jaggesh) ಅವರು ಇಡೀ ಸಿನಿಮಾವನ್ನು ತಮ್ಮ ಹೆಗೆಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ’ ಎಂದು ದತ್ತಣ್ಣ ಹೇಳಿದ್ದಾರೆ. ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

