Karnataka Assembly Polls; ಆಂಜನೇಯ ಯಾರೊಬ್ಬರ ಆಸ್ತಿ ಅಲ್ಲ, ನಾನು ಹಿಂದೂ ಸಿದ್ದರಾಮಯ್ಯನೂ ಹಿಂದೂ: ಡಿಕೆ ಶಿವಕುಮಾರ್
ದೇಶದ ಐಕ್ಯತೆ ಧಕ್ಕೆ ಉಂಟುಮಾಡುವ, ಸಮಾಜದ್ರೋಹ ಕೃತ್ಯ ನಡೆಸುವ ಶಕ್ತಿಗಳನ್ನು ದೂರವಿಡುವ ಮಾತನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಕಾರವಾರ: ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಜೆಪಿ ಸರಿಯಾಗಿ ಓದಿಲ್ಲ ಎಂದು ಡಿಕೆ ಶಿವಕುಮಾರ್ (DK Shivakumar) ಕಾರವಾರದಲ್ಲಿ ಹೇಳಿದರು. ಹಿಂದೂತ್ವ (Hindutva) ಮತ್ತು ಅಂಜನೇಯನನ್ನು (Anjaneya) ಬಿಜೆಪಿಯವರು ಗುತ್ತಿಗೆ ಪಡೆದಿದ್ದಾರಾ? ನಾನು ಹಿಂದೂ ಸಿದ್ದರಾಮಯ್ಯನವರೂ ಹಿಂದೂ ಎಂದ ಶಿವಕುಮಾರ, ತಮ್ಮೊಂದಿಗೆ ಕುಳಿತು ಹನುಮಾನ್ ಚಾಲೀಸಾ ಹೇಳುವಂತೆ ಬಿಜೆಪಿ ನಾಯಕರಿಗೆ ಸವಾಲೆಸೆದರು. ಬಂಗಾರಪ್ಪನವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆ ಜಾರಿಗೆ ತಂದು ಹಳ್ಳಿಹಳ್ಳಿಯಲ್ಲಿರುವ ದೇವಸ್ಥಾನಗಳನ್ನು ಸುಸ್ಥಿತಿಗೆ ತಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹನುಮ ಹುಟ್ಟಿದ ಸ್ಥಳದಲ್ಲಿ ಒಂದು ಪ್ರಾಧಿಕಾರವನ್ನು ಸ್ಥಾಪಿಸಿ, ಎಲ್ಲ ಗ್ರಾಮಗಳಲ್ಲಿ ಆಂಜನೇಯ ದೇವಸ್ಥಾನ ಮತ್ತು ಹನುಮಾನ್ ಗರಡಿಮನೆಗಳನ್ನು ಸ್ಥಾಪಿಸಲು ಬದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು. ದೇಶದ ಐಕ್ಯತೆ ಧಕ್ಕೆ ಉಂಟುಮಾಡವ, ದೇಶದ್ರೋಹ ಮತ್ತು ಸಮಾಜದ್ರೋಹ ಕೃತ್ಯ ನಡೆಸುವ ಶಕ್ತಿಗಳನ್ನು ದೂರವಿಡುವ ಮಾತನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ