Karnataka Assembly Polls: ಹೊಸಕೋಟೆಯಲ್ಲಿ ಬಿಜೆಪಿ-ಕಾಂಗ್ರೆಸ್ ಬೆಂಬಲಿಗರ ನಡುವೆ ಕಿತ್ತಾಟ, ಎದುರಾಳಿಗಳನ್ನು ಎಚ್ಚರಿಸಿದ ಎಂಟಿಬಿ ನಾಗರಾಜ್
ಹೊಸಕೋಟೆಯಲ್ಲಿ ಗೂಂಡಾಗಿರಿ, ದಾದಾಗರಿ ಮಾಡಿದರೆ ಕ್ಷೇತ್ರದಿಂದ ಓಡಿಸಬೇಕಾಗುತ್ತದೆ ಎಂದು ನಾಗರಾಜ್ ಎಚ್ಚರಿಸಿದರು.
ಹೊಸಕೋಟೆ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆಯೇ ಪೋಲಿಸರಿಗೆ ತಲೆಬಿಸಿ ಜಾಸ್ತಿಯಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ (Sharath Bachegowda) ಮತ್ತು ಬಿಜೆಪಿಯ ಎಮ್ ಟಿಬಿ ನಾಗರಾಜ್ (MTB Nagaraj) ಬೆಂಬಲಿಗರ ನಡುವೆ ಬೀದಿ ಜಗಳಗಳು ಶುರುವಾಗಿವೆ. ಇವತ್ತು ನಡೆದ ಗಲಾಟೆಯ ಬಳಿಕ ನಾಗರಾಜ್ ಮೈಕ್ ಮೂಲಕ ಶರತ್ ಮತ್ತು ಅವರ ಬೆಂಬಲಿಗರಿಗೆ ಸವಾಲೆಸೆಯುತ್ತಿರುವುದನ್ನು ನೋಡಬಹುದು. ಹೊಸಕೋಟೆ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆ (assembly) ಆಯ್ಕೆಯಾಗಿ ಅದನ್ನು ಅಭಿವೃದ್ಧಿಪಡಿಸಿ ಆಸ್ಪತ್ರೆ, ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ತಾನು ಎಂದು ನಾಗರಾಜ್ ಹೇಳುತ್ತಿದ್ದಾರೆ. ಹೊಸಕೋಟೆಯಲ್ಲಿ ಗೂಂಡಾಗಿರಿ, ದಾದಾಗರಿ ಮಾಡಿದರೆ ಕ್ಷೇತ್ರದಿಂದ ಓಡಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
