ಹೊಸಕೋಟೆ ಬಳಿ ನಡೆದ ಶನೈಶ್ವರ ಉತ್ಸವದಲ್ಲಿ ಸಚಿವ ಎಮ್ ಟಿಬಿ ನಾಗರಾಜ್ ಕೈಯಲ್ಲಿ ಖಡ್ಗ ಹಿರಿದು ಕುಣಿದಿದ್ದೇ ಕುಣಿದಿದ್ದು!
ಮೆರವಣಿಗೆಯಲ್ಲಿ ಹಲಗೆ, ನಗಾರಿ ಬಾರಿಸುತ್ತಿದ್ದ ಸದ್ದು ಕೇಳಿದ ಕೂಡಲೇ ಸಚಿವರಿಗೆ ನಿಯಂತ್ರಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಕಾರಿನಿಂದಿಳಿದವರೇ ಕೈಯಲ್ಲಿ ಖಡ್ಗ ಹಿರಿದು ತಾಳಕ್ಕೆ ತಕ್ಕಂತೆ ಸ್ಟೆಪ್ಸ್ ಹಾಕತೊಡಗಿದರು.
ಹೊಸಕೋಟೆ: ಪೌರಾಡಳಿತ ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಅವರಿಗೆ ಡ್ಯಾನ್ಸ್ ಅಂದ್ರೆ ಭಾರೀ ಇಷ್ಟ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ (Hosakote) ಬಳಿಯಿರುವ ಶಿವನಾಪುರದ ಶನೈಶ್ವರ (Shanaishwara) ದೇವಸ್ಥಾನದ 16 ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ನಡೆದ ಮೆರವಣಿಗೆಯಲ್ಲಿ ಹಲಗೆ, ನಗಾರಿ ಬಾರಿಸುತ್ತಿದ್ದ ಸದ್ದು ಕೇಳಿದ ಕೂಡಲೇ ಸಚಿವರಿಗೆ ನಿಯಂತ್ರಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಕಾರಿನಿಂದಿಳಿದವರೇ ಕೈಯಲ್ಲಿ ಖಡ್ಗ ಹಿರಿದು ತಾಳಕ್ಕೆ ತಕ್ಕಂತೆ ಸ್ಟೆಪ್ಸ್ ಹಾಕತೊಡಗಿದರು.
Latest Videos