Karnataka Assembly Polls: ಶುಕ್ರವಾರವೂ ವರುಣಾದಲ್ಲಿ ದುನಿಯಾ ವಿಜಯ್, ನಿಶ್ವಿಕಾ ನಾಯ್ಡು ಮತ್ತು ಲೂಸ್ ಮಾದ ಜೊತೆ ಸಿದ್ದರಾಮಯ್ಯ ಅಬ್ಬರದ ಪ್ರಚಾರ
ಚುನಾವಣಾ ಪ್ರಚಾರ ನಡೆಯುತ್ತಿದ್ದರೂ ಸಿನಿಮಾ ತಾರೆಯರ ಅಭಿಮಾನಿಗಳು ವಾಹನ ಹತ್ತಿ ಸೆಲ್ಫೀಗಳನ್ನು ತೆಗೆದುಕೊಳ್ಳುವುದು ಕೂಡ ನಡೆದೇ ಇತ್ತು.
ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ (Siddaramaiah) ಕ್ಷೇತ್ರದಲ್ಲಿ ಇಂದು ಸಹ ಅಬ್ಬರದ ಪ್ರಚಾರ ನಡೆಸಿದರು. ಅವರೊಂದಿಗೆ ನಿನ್ನೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿನಿಮಾ ತಾರೆಯರು ದುನಿಯಾ ವಿಜಯ್ (Duniya Vijay), ಲೂಸ್ ಮಾದ (ಯೋಗೇಶ್) (Loose Mada) ಮತ್ತು ನಿಶ್ವಿಕಾ ನಾಯ್ಡು ಕೂಡ ಪ್ರಚಾರ ವಾಹನದಲ್ಲಿ ಕಾಣಿಸಿದರು. ವಾಹನದಲ್ಲಿ ನಿಂತ ಸಿದ್ದರಾಮಯ್ಯ ಮೈಕ್ ಹಿಡಿದು ಮಾತಾಡುತ್ತಿದ್ದರಾದರೂ ಸದ್ದು ಗದ್ದಲದಲ್ಲಿ ಅದು ಸರಿಯಾಗಿ ಕೇಳಿಸಲಿಲ್ಲ. ಸಿದ್ದರಾಮಯ್ಯ ಮತ್ತು ನಟನಟಿಯರ ಮೇಲೆ ಬೆಂಬಲಿಗರು ಹೂಮಳೆಗರೆಯುವುದು ಜಾರಿಯಲ್ಲಿತ್ತು. ಚುನಾವಣಾ ಪ್ರಚಾರ ನಡೆಯುತ್ತಿದ್ದರೂ ಸಿನಿಮಾ ತಾರೆಯರ ಅಭಿಮಾನಿಗಳು ವಾಹನ ಹತ್ತಿ ಸೆಲ್ಫೀಗಳನ್ನು ತೆಗೆದುಕೊಳ್ಳುವುದು ಕೂಡ ನಡೆದೇ ಇತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
