ಕಣ್ಣೀರು ಸುರಿಸುತ್ತ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಒಂದಾಗ ಅಶ್ವಿನಿ ಗೌಡ, ಜಾಹ್ನವಿ
ಈ ಮೊದಲು ಜಾಹ್ನವಿ-ಅಶ್ವಿನಿ ಗೌಡ ಆಪ್ತವಾಗಿದ್ದರು. ಆದರೆ ಕೆಲವು ದಿನಗಳು ಕಳೆದ ನಂತರ ಬಿರುಕು ಮೂಡಿತು. ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೇ ಆಟ ಮುಂದುವರಿಸಿದ್ದರು. ಇದರಿಂದ ಎಲ್ಲರಿಗೂ ಅಚ್ಚರಿ ಆಯಿತು. ಆದರೆ ಈಗ ವಾತಾವರಣ ಮತ್ತೆ ಬದಲಾಗಿದೆ. ಅಶ್ವಿನಿ ಗೌಡ, ಜಾಹ್ನವಿ ಪರಸ್ಪರ ತಬ್ಬಿಕೊಂಡು ಅತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆರಂಭ ಆದಾಗಿನಿಂದ ಜಾಹ್ನವಿ ಹಾಗೂ ಅಶ್ವಿನಿ ಗೌಡ ಬಹಳ ಆಪ್ತವಾಗಿದ್ದರು. ಆದರೆ ಕೆಲವು ದಿನಗಳು ಕಳೆದ ನಂತರ ಅವರ ನಡುವೆ ಬಿರುಕು ಮೂಡಿತು. ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೇ ಆಟ ಮುಂದುವರಿಸಿದ್ದರು. ಇದರಿಂದ ಎಲ್ಲರಿಗೂ ಅಚ್ಚರಿ ಆಗಿತ್ತು. ಆದರೆ ಈಗ ವಾತಾವರಣ ಮತ್ತೆ ಬದಲಾಗಿದೆ. ಅಶ್ವಿನಿ ಗೌಡ (Ashwini Gowda) ಮತ್ತು ಜಾಹ್ನವಿ ಅವರು ಪರಸ್ಪರ ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ. ತಮ್ಮ ಕುಟುಂಬದವರಿಂದ ಬಂದ ಪತ್ರವನ್ನು ಪಡೆಯಬೇಕೋ ಅಥವಾ ತ್ಯಾಗ ಮಾಡಬೇಕೋ ಎಂಬ ಗೊಂದಲಮಯ ಪರಿಸ್ಥಿತಿಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಈ ರೀತಿ ನಡೆದುಕೊಂಡಿದ್ದಾರೆ. ನವೆಂಬರ್ 6ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
