AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಾರಾಷ್ಟ್ರದಲ್ಲಿ ಧಗಧಗನೆ ಹೊತ್ತಿ ಉರಿದ ಕೆಮಿಕಲ್​​​ ಕಾರ್ಖಾನೆ, 12 ಜನರ ರಕ್ಷಣೆ

Video: ಮಹಾರಾಷ್ಟ್ರದಲ್ಲಿ ಧಗಧಗನೆ ಹೊತ್ತಿ ಉರಿದ ಕೆಮಿಕಲ್​​​ ಕಾರ್ಖಾನೆ, 12 ಜನರ ರಕ್ಷಣೆ

ಅಕ್ಷಯ್​ ಪಲ್ಲಮಜಲು​​
|

Updated on: Nov 15, 2025 | 12:10 PM

Share

ಮಹಾರಾಷ್ಟ್ರದ ಜಲಗಾಂವ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಇಂದು ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರೂ, ಯಾವುದೇ ಸಾವುನೋವು ವರದಿಯಾಗಿಲ್ಲ. ಕಾರ್ಖಾನೆಯಲ್ಲಿದ್ದ 12 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ರಾಸಾಯನಿಕ ವಸ್ತುಗಳು ಬೆಂಕಿ ನಿಯಂತ್ರಣಕ್ಕೆ ಸವಾಲಾಗಿವೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಜಲಗಾಂವ್‌, ನ.15: ಮಹಾರಾಷ್ಟ್ರದ ಜಲಗಾಂವ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ (Jalgaon chemical factory) ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದು,ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಜಲಗಾಂವ್ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ದಳ ತಂಡ ಹಾಗೂ ಸುತ್ತಮುತ್ತಲಿನ ಪ್ರದೇಶದ 5 ರಿಂದ 10 ಇತರ ಅಗ್ನಿಶಾಮಕ ದಳ ಸ್ಥಳ ಧಾವಿಸಿದೆ. ಬೆಂಕಿ ನಂದಿಸುವ ಪ್ರಯತ್ನಗಳು ಮುಂದುವರೆದಿವೆ. ಈ ಘಟನೆಯಿಂದ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಕಾರ್ಖಾನೆಯಲ್ಲಿ ರಾಸಾಯನಿಕ ವಸ್ತುಗಳು ಇರುವ ಕಾರಣ ಬೆಂಕಿ ನಂದಿಸಲು ತುಂಬಾ ಕಷ್ಟ ಎಂದು ಅಗ್ನಿಶಾಮಕ ದಳ ಹೇಳಿದೆ. ಕಾರ್ಖಾನೆ ಒಳಗೆ 12 ಜನರು ಇದ್ದರು. ಇದೀಗ ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇನ್ನು ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ಇನ್ನು ಪತ್ತೆಯಾಗಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ