Daily Horoscope: ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

Daily Horoscope: ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

ವಿವೇಕ ಬಿರಾದಾರ
|

Updated on: Jan 24, 2025 | 6:48 AM

ಜನವರಿ 24, 2025 ರ ಶುಕ್ರವಾರದ ಪಂಚಾಂಗ ವಿವರಗಳು, ತಲಕಾಡಿನಲ್ಲಿ ನಡೆಯುವ ಮನೋನ್ಮಣಿ ಜಯಂತಿ, ಭೋಮ್ಮನಹಳ್ಳಿಯ ರಥೋತ್ಸವ, ಮತ್ತು ತಲಕಾಡಿನ ವರ್ಧಂತಿ ಮಹೋತ್ಸವದ ಬಗ್ಗೆ ತಿಳಿಸುತ್ತದೆ. ಪಾರ್ಶ್ವನಾಥರ ಜನ್ಮದಿನ ಮತ್ತು ಶ್ರವಣ ನಕ್ಷತ್ರದ ಮಳೆಯ ಪ್ರಾರಂಭದ ಬಗ್ಗೆಯೂ ಮಾಹಿತಿ ಇದೆ. ಬುಧಗ್ರಹದ ರಾಶಿ ಪರಿವರ್ತನೆ ಮತ್ತು ಬುಧಾದಿತ್ಯ ಯೋಗದ ಬಗ್ಗೆಯೂ ವಿವರಣೆ ನೀಡಲಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರಿಂದ ರಾಶಿ ಭವಿಷ್ಯವನ್ನು ಒಳಗೊಂಡಿದೆ.

ದಿನಾಂಕ 24-01-2025 ಶುಕ್ರವಾರ ಕೃಷಿಣಾಮ ಸಂವತ್ಸರ ಉತ್ತರಾಯಣ ಪುಷ್ಯ ಮಾಸ ಹೇಮಂತ ಋತು ಕೃಷ್ಣ ಪಕ್ಷ ದಶಮಿ ಅನುರಾಧ ನಕ್ಷತ್ರ ವೃದ್ಧಿ ಯೋಗ ಭದ್ರ ಕರಣ. ಈ ದಿನದ ರಾಹುಕಾಲ 11:04 ನಿಂದ 12:31ರ ತನಕ ಇರುತ್ತದೆ. ಸರ್ವಸಿದ್ದಿ ಕಾಲ, ಸಂಕಲ್ಪ ಕಾಲ ಶುಭ ಕಾಲ 12:31 ರಿಂದ 1:58 ತನಕ ಇರುತ್ತದೆ.

ಇಂದು ತಲಕಾಡಿನಲ್ಲಿ ಮನೋನ್ಮಣಿ ಜಯಂತಿ, ಭೋಮ್ಮನ ಹಳ್ಳಿಯಲ್ಲಿ ರಥೋತ್ಸವ ನಡೆಯತ್ತದೆ. ಹಾಗೆ ತಲಕಾಡಿನಲ್ಲಿ ವರ್ಧಂತಿಯ ಮಹೋತ್ಸವ ನಡೆಯತ್ತದೆ. ಪಾರ್ಶ್ವನಾಥರ ಜನ್ಮದಿನ ಇರುತ್ತದೆ. ಶ್ರವಣ ನಕ್ಷತ್ರದ ಮಳೆ ಕೂಡ ಪ್ರಾರಂಭವಾಗುತ್ತದೆ.

ಬುಧಗ್ರಹ 5:45ಕ್ಕೆ ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಬುಧಾದಿತ್ಯ ಯೋಗ ರವಿ ಜೊತೆ ಬುಧ ಸೇರಿಕೊಂಡಾಗ ಬುಧಾದಿತ್ಯ ಯೋಗ ಕೂಡ ಉಂಟಾಗತ್ತದೆ. ರವಿ ಮಕರ ರಾಶಿಯಲ್ಲಿ ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಈ ದಿನದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.