ವೈಡ್-ನೋಬಾಲ್-ವೈಡ್: ಲಯತಪ್ಪಿದ ಯಾರ್ಕರ್ ಕಿಂಗ್, ನಡೆಯುತ್ತಿಲ್ಲ ಬುಮ್ರಾ ಮ್ಯಾಜಿಕ್

Updated on: May 05, 2026 | 8:50 AM

ಯಾರ್ಕರ್​ ಕಿಂಗ್ ಎಂದೇ ಖ್ಯಾತಿ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯ ತಪ್ಪಿದ್ದಾರೆ. ಅದು ಸ್ಪಷ್ಟವಾಗುತ್ತಿದೆ. ಅವರು ಬ್ಯಾಕ್ ಟು ಬ್ಯಾಕ್ ನೋಬಾಲ್​​​ಗಳನ್ನು ಎಸೆದು ಟೀಕೆಗೆ ಗುರಿಯಾಗಿದ್ದಾರೆ. ಈಗ ಎಲ್​​ಎಸ್​ಜಿ ವಿರುದ್ಧದ ಪಂದ್ಯದಲ್ಲೂ ಹಾಗೆಯೇ ಆಗಿದೆ. ಅವರು ವಿಕೆಟ್ ಏನೋ ಕಿತ್ತಿದ್ದರು. ಆದರೆ, ಅದು ನೋಬಾಲ್ ಆಯಿತು ಎಂಬುದು ಬೇಸರದ ವಿಷಯ.

ಯಾರ್ಕರ್ ಕಿಂಗ್ ಎಂದೇ ಜನಪ್ರಿಯತೆ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯತಪ್ಪಿದ್ದು ಸ್ಪಷ್ಟವಾಗುತ್ತಿದೆ. ಈ ಬಾರಿ ಅವರಿಗೆ ಹೆಚ್ಚಿನ ವಿಕೆಟ್ ಸಿಕ್ಕಿಲ್ಲ ಎಂಬ ಕೊರಗು ಒಂದು ಕಡೆಯಾದರೆ, ನೋಬಾಲ್ ಹಾಕುವ ಮೂಲಕ ದುಬಾರಿ ಆಗುತ್ತಿದ್ದಾರೆ. ಮೇ4 ಎಲ್​​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಲಯತಪ್ಪಿದ್ದು ಸ್ಪಷ್ಟವಾಗಿದೆ. ಹಿಮ್ಮತ್ ಸಿಂಗ್ ಅವರು ಬುಮ್ರಾ ಬಾಲಿಂಗ್​​ನಲ್ಲಿ ಕೀಪರ್ ಕ್ಯಾಚ್ ಕೊಟ್ಟರು. ದುರಾದೃಷ್ಟ ಎಂದರ ಅದು ನೋಬಾಲ್ ಆಯಿತು. ಆ ಬಳಿಕ ಒಂದು ವೈಡ್ ಹಾಕಿದರು. ಬಳಿಕ ಮತ್ತೆ ನೋಬಾಲ್ ಹಾಕಿದರು. ನಿನ್ನೆಯ ಪಂದ್ಯದಲ್ಲಿ ಮೂರು ಹಾಗೂ ಈ ಸೀಸನ್ ಅಲ್ಲಿ 9 ನೋಬಾಲ್​​ಗಳನ್ನು ಬುಮ್ರಾ ಎಸೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 05, 2026 08:37 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More