ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಚನ್ನಬಸ್ಸಪ್ಪ ಬದುಕುಳಿಯಲಿಲ್ಲ!
ಹಾಸನ ಆಲೂರು ತಾಲ್ಲೂಕಿನ ಹೊಸಳ್ಳಿ ಗ್ರಾಮದರಾಗಿದ್ದ ಚನ್ನಬಸ್ಸಪ್ಪ ಯಲಹಂಕ ವಾಯುನೆಲೆಯ ಡಿಎಸ್ ಸಿ ಯೂನಿಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಹಾಸನ: ನವೆಂಬರ್ 19 ರಂದು ಬೆಂಗಳೂರಿನ ಹುಣಸಮಾರನಹಳ್ಳಿ ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಹೆಚ್ ಬಿ ಚನ್ನಬಸ್ಸಪ್ಪ (Jawan HB Channabassappa) ಅವರು ಎರಡು ವಾರದವರೆಗೆ ಸಾವಿನೊಂದಿಗೆ ಹೋರಾಟ ನಡೆಸಿ ಕೈ ಚೆಲ್ಲಿದ್ದಾರೆ. 54-ವರ್ಷದವರಾಗಿದ್ದ ಹಾಸನ ಆಲೂರು ತಾಲ್ಲೂಕಿನ ಹೊಸಳ್ಳಿ (Hosalli) ಗ್ರಾಮದರಾಗಿದ್ದ ಚನ್ನಬಸ್ಸಪ್ಪ ಯಲಹಂಕ ವಾಯುನೆಲೆಯ ಡಿಎಸ್ ಸಿ ಯೂನಿಟ್ ನಲ್ಲಿ (DSC unit) ಸೇವೆ ಸಲ್ಲಿಸುತ್ತಿದ್ದರು. ಸಕಲ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ