ಹೊಸಬರ ‘ಲವ್ ಸೀಸನ್ಸ್’ ಸಿನಿಮಾ ತಂಡಕ್ಕೆ ಧೈರ್ಯ ತುಂಬಿದ ಜಯತೀರ್ಥ
ಮುಖ್ಯಾಂಶಗಳು
- ರಂಗಭೂಮಿ ಪ್ರತಿಭೆಗಳ ‘ಲವ್ ಸೀಸನ್ಸ್’ ಚಿತ್ರದ ಟ್ರೇಲರ್ ಬಿಡುಗಡೆ.
- ಕೃತ್ವಿಕ್ ನಿರ್ದೇಶನ, ಎನ್ಆರ್ ಮಂಜುನಾಥ ನಿರ್ಮಾಣದ ಸಿನಿಮಾ.
- ಟ್ರೇಲರ್ ಬಿಡುಗಡೆ ವೇಳೆ ಹೊಸಬರಿಗೆ ಸ್ಫೂರ್ತಿ ತುಂಬಿದ ಜಯತೀರ್ಥ.
‘ಲವ್ ಸೀಸನ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ, ದಿವ್ಯಾ ಕೀರ್ತಿ, ಚಂದನಾ ಗೌಡ, ಮಂಡ್ಯ ರಮೇಶ್, ಜಯತೀರ್ಥ ಮುಂತಾದವರು ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ವೇಳೆ ಜಯತೀರ್ಥ ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ..
‘ಲವ್ ಸೀಸನ್ಸ್’ (Love Seasons) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮುಕುಂದ ರಾಮಸ್ವಾಮಿ, ದಿವ್ಯಾ ಕೀರ್ತಿ, ಚಂದನಾ ಗೌಡ, ಮಂಡ್ಯ ರಮೇಶ್, ಜಯತೀರ್ಥ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಜಯತೀರ್ಥ ಅವರು ಮಾತನಾಡಿದರು. ಹೊಸಬರ ತಂಡಕ್ಕೆ ಅವರು ಧೈರ್ಯ ತುಂಬಿದರು. ‘ಈ ತಂಡದವರ ಕಣ್ಣಲ್ಲಿ ಆತಂಕ ಕಾಣುತ್ತಿದೆ. ಆದರೆ ಆತಂಕದ ಅವಶ್ಯಕತೆ ಇಲ್ಲ. ನೀವು ಮಾಡುವ ಕೆಲಸ ಆಗಿದೆ. ಸಿನಿಮಾ ಮಾಡಿ ಗೆದ್ದಿದ್ದೀರಿ. ಏನೇ ಬಂದರೂ ಎದುರಿಸಿ. ಈ ಕೂಡಲೇ ಈ ಕೆಲಸದ ಫಲ ನಿಮಗೆ ಸಿಗದೇ ಇರಬಹುದು. ಇನ್ನು ಯಾವತ್ತೋ ಸಿಗುತ್ತದೆ. ಪ್ರಾಮಾಣಿಕತೆ ಮಾತ್ರ ಗೆಲ್ಲುವುದು ಇಲ್ಲಿ. ಒಬ್ಬ ನಿರ್ಮಾಪಕರು ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರ ಆತ್ಮವಿಶ್ವಾಸ ಕುಗ್ಗದ ರೀತಿಯಲ್ಲಿ ನೋಡಿಕೊಳ್ಳಿ. ನಿಮ್ಮನ್ನು ನೋಡಿದ 10 ಜನರಿಗೆ ಸ್ಫೂರ್ತಿ ಆಗಬಹುದು’ ಎಂದು ಜಯತೀರ್ಥ ಅವರು ಹೇಳಿದರು. ಎನ್ಆರ್ ಮಂಜುನಾಥ (ನೀಲೇರಿ) ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕೃತ್ವಿಕ್ ಅವರು ನಿರ್ದೇಶನ ಮಾಡಿದ್ದಾರೆ. ಜುಲೈ 3ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಫುಟ್ಪಾತ್ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ

