ಬೆಂಗಳೂರು: ಹೆಚ್ಡಿ ಕುಮಾರಸ್ವಾಮಿಗೆ ಬೃಹತ್ ಸೀರೆ ಹಾರ ಹಾಕಿದ ಅಭಿಮಾನಿಗಳು
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ನಡೆದಿದ್ದು, ಕೊನೆಯದಾಗಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಇಂದು (ಏ.02) ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಹೆಚ್.ಡಿ. ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumarswamy) ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ (Pancharatna Yatra) ನಡೆದಿದ್ದು, ಕೊನೆಯದಾಗಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ನಡೆಯುತ್ತಿದೆ. ಈ ಹಿನ್ನೆಲೆ ಇಂದು (ಏ.02) ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ (Yelahanka Assembly Constituency) ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಹೆಚ್.ಡಿ. ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಬೃಹತ್ ಸೀರೆಯ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಅಭಿಮಾನಿಗಳು ತೆರಹವಾರು ಹಾರ ಹಾಕಿದ್ದರು. ಇದು ಗಿನ್ನಿಸ್ ಬುಕ್ ಆಫ್ ರೆಕಾಡ್ನಲ್ಲೂ ದಾಖಲಾಗಿದೆ.