ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim), ಬೇರೆ ಪಕ್ಷಗಳ ನಾಯಕರನ್ನು ಗೇಲಿ ಮಾಡುವುದರಲ್ಲಿ ಎತ್ತಿದ ಕೈ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಬರ ಮನೆಯಲ್ಲಿ 8 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತಾಡಿದ ಇಬ್ರಾಹಿಂ ಅವರು ‘ಈಗೇನ್ ಹೇಳ್ತಿಯಪ್ಪಾ ರವಿ (ಸಿಟಿ ರವಿ) (CT Ravi), ಯಡಿಯೂರಪ್ಪನವರೇ ನೀವೇನು ಹೇಳ್ತೀರಿ? ಕಟೀಲು (Nalin Kumar Kateel) ಬಾರಿಸು ಪಿಟೀಲು!’ ಅಂತೆಲ್ಲ ಗೇಲಿ ಮಾಡಿದರು. ಗುತ್ತಿಗೆದಾರರ ಸಂಘದವರು ಸರ್ಕಾರದ ಮಂತ್ರಿಗಳು ಕಮೀಶನ್ ಪಡೆಯುತ್ತಿರುವ ಬಗ್ಗೆ ದಾಖಲೆ ಸಮೇತ ಹೇಳಿಕೆ ನೀಡಿದಾಗ ಅವರು ಸುಳ್ಳು ಹೇಳಿತ್ತಿದ್ದಾರೆ ಅಂತ ಬಿಜೆಪಿಯವರು ಹೇಳಿದರು. ಹಾಗಾದರೆ, ಅವರು ಸಂಘದ ಪದಾಧಿಕಾರಿಗಳ ವಿರುದ್ಧ ಯಾಕೆ ಕೇಸ್ ಮಾಡಲಿಲ್ಲ ಎಂದು ಇಬ್ರಾಹಿಂ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ