ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ, ಅಪರೇಶನ್ ಹಸ್ತದ ಭೀತಿ ಇಲ್ಲ ಎಂದ ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2023 | 7:37 PM

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಸಂಜೆ 6 ಗಂಟೆಗೆ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿದೆ. ಕುಮಾರಸ್ವಾಮಿ ಸಮಯಕ್ಕೆ ಮೊದಲೇ ಸಭೆಗೆಂದು ನಿಗದಿಯಾಗಿರುವ ರೆಸಾರ್ಟ್ ಗೆ ಆಗಮಿಸಿದ್ದರು. ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಶಾಸಕಾಂಗ ಸಭೆ ಎರಡು ದಿನಗಳ ಕಾಲ ನಡೆಯಲಿದೆ. ಇಷ್ಟರಲ್ಲೇ ಬೆಳಗಾವಿಯಲ್ಲಿ ವಿಧಾನ ಸಭಾ ಅಧಿವೇಶನ ಶುರುವಾಗಲಿರುವುದರಿಂದ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ,

ಹಾಸನ: ಜೆಡಿಎಸ್ ಪಕ್ಷದ ಕೋರ್ ಸಮಿತಿ ಅಧ್ಯಕ್ಷ ಜಿಟಿ ದೇವೇಗೌಡ (GT Deve Gowda) ಪಕ್ಷದ ಶಾಸಕರ ಬಗ್ಗೆ ಒಗ್ಗಟ್ಟಿನ ಮಂತ್ರ ಜಪಿಸಿದರೂ ಆಪರೇಶನ್ ಹಸ್ತದ ಕತ್ತಿ ನೆತ್ತಿಯ ಮೇಲೆ ಅಪಾಯಕಾರಿಯಾಗಿ ನೇತಾಡುತ್ತಿದೆ! ಖುದ್ದು ಜಿಟಿಡಿಯೇ ವಿಧಾನ ಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಕದ ತಟ್ಟಿದವರು! ಬಿಡಿ ಅದು ಕನ್ನಡಿಗರಿಗೆ ಗೊತ್ತಿರದ ವಿಷಯವೇನಲ್ಲ. ಜೆಡಿಎಸ್ ಪಕ್ಷದ ಶಾಸಕರೆಲ್ಲ ಎರಡು ದಿನಗಳ ಜೆಡಿಎಸ್ ಶಾಸಕಾಂಗ ಸಭೆಗಾಗಿ (JDS legislature party meeting) ಹಾಸನಕ್ಕೆ ಆಗಮಿಸಿದ್ದಾರೆ. ಆಪರೇಶನ್ ಹಸ್ತದ ಭೀತಿಯಿಂದ ಸಭೆ ನಡೆಸಲಾಗುತ್ತಿದೆಯೇ ಅಂತ ಟಿವಿ9 ಕನ್ನಡ ವಾಹಿನಿ ವರದಿಗಾರ ಜಿಟಿಡಿಯವರನ್ನು ಕೇಳಿದರೆ, ಹಾಗೇನೂ ಇಲ್ಲ, ಶಾಸಕರು ಹಾಸನಾಂಬೆಯ ದರ್ಶನ ಮಾಡಬೇಕೆಂದಿದ್ದರು, ಹಾಗಾಗಿ ಅವರೆಲ್ಲ ಬಂದಿರುವುದಾಗಿ ಹೇಳಿದರು. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಸಂಜೆ 6 ಗಂಟೆಗೆ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿದೆ. ಕುಮಾರಸ್ವಾಮಿ ಸಮಯಕ್ಕೆ ಮೊದಲೇ ಸಭೆಗೆಂದು ನಿಗದಿಯಾಗಿರುವ ರೆಸಾರ್ಟ್ ಗೆ ಆಗಮಿಸಿದ್ದರು.

ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಶಾಸಕಾಂಗ ಸಭೆ ಎರಡು ದಿನಗಳ ಕಾಲ ನಡೆಯಲಿದೆ. ಇಷ್ಟರಲ್ಲೇ ಬೆಳಗಾವಿಯಲ್ಲಿ ವಿಧಾನ ಸಭಾ ಅಧಿವೇಶನ ಶುರುವಾಗಲಿರುವುದರಿಂದ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪಕ್ಷದ ಶಾಸಕರಲ್ಲಿ ಅನೇಕರು ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.