ಬೆಳಗಾವಿ ಅಧಿವೇಶನ: ಸದನದಲ್ಲಿ ಹೆಡ್ ಮಾಸ್ಟರ್ ಆದ ಸ್ಪೀಕರ್ ಎದುರು ತಡವಾಗಿ ಬಂದ ಶರಣಗೌಡ ಕಂದ್ಕೂರ್ ಸಾರಿ ಸರ್ ಅಂದರು!
Karnataka Assembly Winter Session: ರಾಜಕಾರಣವನ್ನು ವೃತ್ತಿಯನ್ನಾಗಿ ಮಾಡಿಕೊಂಡವರು ವೃತ್ತಿಗೆ ಅನ್ವಯಿಸುವ ನೀತಿ ನಿಯಮಗಳನ್ನು ರೂಢಿಸಿಕೊಂಡು ವೃತ್ತಿಪರ ಧೋರಣೆ ಪ್ರದರ್ಶಿಸಬೇಕಾಗುತ್ತದೆ. ಹಿರಿಯ ಶಾಸಕರಾದ ಕೆಜೆ ಜಾರ್ಜ್, ಆರಗ ಜ್ಞಾನೇಂದ್ರ, ಸುರೇಶ್ ಗೌಡ, ಅಶ್ವಥ್ ನಾರಾಯಣ ಮೊದಲಾದವರೆಲ್ಲ ಸಮಯಕ್ಕೆ ಸರಿಯಾಗಿ ಸದನಕ್ಕೆ ಸರಿಯಾಗಿ ಅಗಮಿಸಿ ಯುವ ನಾಯಕರಿಗೆ ಮಾದರಿಯಾಗಿದ್ದಾರೆ, ಅವರನ್ನು ಅನುಸರಿಸಬೇಕು ಎಂದು ಸ್ಪೀಕರ್ ಖಾದರ್ ಅವರು ಹೇಳುವುದು ಅತ್ಯಂತ ಉಚಿತವಾಗಿದೆ.
ಬೆಳಗಾವಿ: ವಿಧಾನ ಸಭಾಧ್ಯಕ್ಷರು ಸದನದಲ್ಲಿ ಆಗಾಗ ಹೆಡ್ ಮಾಸ್ಟರ್ (headmaster) ಕೂಡ ಆಗಬೇಕಾಗುತ್ತೆ. ಒಬ್ಬ ಶಾಲಾ ಮುಖ್ಯೋಪಾಧ್ಯಾಯನ ಕೆಲಸವನ್ನು ಇಂದು ಸ್ಪೀಕರ್ ಯುಟಿ ಖಾದರ್ (UT Khader) ಸದನದಲ್ಲಿ ಮಾಡಿದರು. ಸದನ ನಡೆಸುವ ಸಂಪೂರ್ಣ ಜವಾಬ್ದಾರಿ ಅವರ ಮೇಲಿರುವಾಗ ಯಾರು ಯಾವಾಗ ಬರ್ತಾರೆ, ಯಾವ ಎದ್ದುಹೋಗುತ್ತಾರೆ ಅನ್ನೋದನ್ನು ಗಮನಿಸುವುದು ಸೂಕ್ತ ಕೆಲಸ. ಇಂದು ಸದನಕ್ಕೆ ತಡವಾಗಿ ಬಂದವರ ಯಾದಿಯನ್ನು ತರಿಸಿಕೊಂಡ ಸ್ಪೀಕರ್ ಯಾಕೆ ತಡ ಅಂತ ನಿರ್ದಾಕ್ಷಿಣ್ಯವಾಗಿ ಕೇಳಿದರು. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (Sharangouda Kandkur) ಲೇಟ್ ಲತೀಫ್ ಗಳಲ್ಲಿ ಒಬ್ಬರು. ಯಾಕೆ ಸ್ವಾಮಿ? ಅಂತ ಕೇಳಿದಾಗ ಅವರು ಮೊದಲು ಸಾರಿ ಅನ್ನುತ್ತಾರೆ. ಆದರೆ ಸ್ಪೀಕರ್ ಪಕ್ಕಾ ಹೆಡ್ ಮಾಸ್ಟರ್ ಗಳಂತೆ ಸಾರಿ ಬೇಡ, ಯಾಕೆ ತಡ ಅನ್ನುತ್ತಾರೆ. ಇಂಧನ ಸಚಿವರು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದರು, ಅದು ರದ್ದಾದ ಮಾಹಿತಿ ತಮಗೆ ಸಿಗಲಿಲ್ಲ ಅಂತ ಸಬೂಬು ಹೇಳುತ್ತಾರೆ. ಯುವ ಶಾಸಕನಾಗಿ ತಡವಾಗಿ ಬರೋದು ಸರಿಯಲ್ಲ ಎಂದು ಸ್ಪೀಕರ್ ರೇಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ