ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ‘ಜನ ಮರುಳೋ ಜಾತ್ರೆ ಮರುಳೋ’ ಎಂದ ಜಾನ್ವಿ

Updated By: ರಾಜೇಶ್ ದುಗ್ಗುಮನೆ

Updated on: Dec 02, 2025 | 2:39 PM

ಗಿಲ್ಲಿ ಬಗ್ಗೆ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಈಗ ಜಾನ್ವಿ ಅವರು ಬಿಗ್ ಬಾಸ್ ಮನೆಯ ಮಾಜಿ ಸ್ಪರ್ಧೀ ಈ ಬಗ್ಗೆ ಮಾತನಾಡಿದ್ದಾರೆ. ಅವರು ಜನ ಮರುಳೋ ಜಾತ್ರೆ ಮರುಳೋ ಎಂದರು. ಅವರು ಹೀಗೆ ಹೇಳಲು ಕಾರಣವನ್ನು ನೀಡಿದರು. ಆ ಬಗ್ಗೆ ಇಲ್ಲಿ ಇದೆ ವಿವರ.

ಬಿಗ್ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿ ಗಿಲ್ಲಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಅವರಿಗೆ ಸಾಕಷ್ಟು ಕ್ರೇಜ್ ಸೃಷ್ಟಿ ಆಗಿದೆ ಎಂಬುದು ಜಾನ್ವಿಗೆ ತಿಳಿದಿತ್ತಂತೆ. ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ಅವರು ‘ಜನ ಮರುಳೋ ಜಾತ್ರೆ ಮರುಳೋ’ ಎಂದು ಹೇಳಿದರು. ಅವರು ಹೇಳಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನು ಕೆಲವರು ಟೀಕಿಸಿದ್ದಾರೆ. ‘ಜನರು ಸುಮ್ಮನೆ ಬೆಂಬಲ ನೀಡೋದಿಲ್ಲ’ ಎಂದಿದ್ದಾರೆ. ‘ಗಿಲ್ಲಿ ಕ್ರೇಜ್ ನೋಡಿ ಜಾನ್ವಿಗೆ ಉರಿದಿರಬೇಕು’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಜಾನ್ವಿ ಹಾಗೂ ಗಿಲ್ಲಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆದ ಉದಾಹರಣೆ ಇದೆ. ಗಿಲ್ಲಿಯನ್ನು ಅವರು ಪ್ರಶಂಸಿಸಿದ್ದು ಕಡಿಮೆ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.