Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​

| Updated By: ಮದನ್​ ಕುಮಾರ್​

Updated on: Aug 22, 2022 | 7:30 AM

Jothe Jotheyali Controversy: ಸಂಭಾವನೆ ವಿಚಾರದಲ್ಲಿ ‘ಜೊತೆ ಜೊತೆಯಲಿ’ ಸೀರಿಯಲ್​ ನಿರ್ಮಾಪಕರು ಮತ್ತು ಅನಿರುದ್ಧ್​ ನಡುವೆ ಅನೇಕ ಬಾರಿ ಮಾತುಕತೆ ಆಗಿತ್ತು. ಆ ವಿಚಾರಗಳನ್ನು ಈಗ ಅನಿರುದ್ಧ್​ ತೆರೆದಿಟ್ಟಿದ್ದಾರೆ.

ನಟ ಅನಿರುದ್ಧ್ (Anirudh Jatkar)​ ಅವರಿಗೆ ‘ಜೊತೆ ಜೊತೆಯಲಿ’ ಸೀರಿಯಲ್​ (Jothe Jotheyali Kannada Serial) ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಆದರೆ ಈಗ ಈ ಧಾರಾವಾಹಿ ತಂಡದಲ್ಲಿ ಮನಸ್ತಾಪ ಭುಗಿಲೆದ್ದಿದೆ. ಅನೇಕ ಕಾರಣಗಳಿಂದಾಗಿ ನಿರ್ಮಾಪಕ ಆರೂರು ಜಗದೀಶ್​ (Aroor Jagadish) ಮತ್ತು ಅನಿರುದ್ಧ್​ ನಡುವೆ ವೈಮನಸ್ಸು ಉಂಟಾಗಿದೆ. ಈ ಕುರಿತು ಇಬ್ಬರೂ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸಿದ್ದಕ್ಕಾಗಿ ತಮಗೆ ಸಿಕ್ಕ ಸಂಭಾವನೆಯೇ ಕಡಿಮೆ ಎಂದು ಅನಿರುದ್ಧ್​ ಹೇಳಿದ್ದಾರೆ. ಸಂಬಳದ ವಿಚಾರಕ್ಕೆ ಏನೆಲ್ಲ ಮಾತುಕತೆಗಳು ನಡೆದಿದ್ದವು ಎಂಬುದನ್ನು ಅವರು ಈಗ ವಿವರಿಸಿದ್ದಾರೆ. ‘ಸೂಕ್ತ ಸಂಬಳ ಕೇಳುವ ಅಧಿಕಾರ ನನಗೆ ಇಲ್ಲವೇ’ ಎಂದು ಅನಿರುದ್ಧ್​ ಪ್ರಶ್ನಿಸಿದ್ದಾರೆ.

Follow us on