ವಿಡಿಯೋ: ಉಡುಪಿ ಕೃಷ್ಣನ ದರ್ಶನ ಪಡೆದು ಕನ್ನಡದಲ್ಲಿ ಮಾತನಾಡಿದ ಜೂ ಎನ್ಟಿಆರ್
Jr NTR: ಜೂ ಎನ್ಟಿಆರ್ ಇಂದು ಕರ್ನಾಟಕಕ್ಕೆ ಬಂದಿದ್ದರು. ತಾಯಿಯ ಆಸೆ ಈಡೇರಿಸಲು ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ವಿಶೇಷ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜೂ ಎನ್ಟಿಆರ್, ತಮಗೆ ಎದುರಾದ ಮಾಧ್ಯಮಗಳೊಡನೆ ಕನ್ನಡದಲ್ಲಿಯೇ ಮಾತನಾಡಿದರು.
ನಟ ಜೂ ಎನ್ಟಿಆರ್ ಇಂದು (ಆಗಸ್ಟ್ 31) ಕರ್ನಾಟಕಕ್ಕೆ ಭೇಟಿ ನೀಡಿದ್ದರು. ತಮ್ಮ ತಾಯಿಯ ಆಸೆಯಂತೆ ಅವರ ಹುಟ್ಟುಹಬ್ಬಕ್ಕೆ ಮುಂಚೆ ಅವರನ್ನು ಕುಂದಾಪುರಕ್ಕೆ ಹಾಗೂ ಉಡುಪಿಯ ಶ್ರೀಕೃಷ್ಣ ದೇವಸ್ಥಾನಕ್ಕೆ ಕರೆತಂದಿದ್ದರು. ಜೂ ಎನ್ಟಿಆರ್ ಜೊತೆಗೆ ನಟ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಜೊತೆಗಿದ್ದರು. ಮಂಗಳೂರಿಗೆ ಬಂದಿಳಿದು, ಅಲ್ಲಿಂದ ಉಡುಪಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಂದ ಕುಂದಾಪುರಕ್ಕೆ ತೆರಳಿದ ಜೂ ಎನ್ಟಿಆರ್ ಆ ನಂತರ ಬಸ್ರೂರಿಗೆ ತೆರಳಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋಗೆ ಭೇಟಿ ನೀಡಿದರು. ಅಲ್ಲಿ ತಮ್ಮ ಮುಂದಿನ ‘ಡ್ರ್ಯಾಗನ್’ ಸಿನಿಮಾದ ಕೆಲವು ಟ್ಯೂನ್ಗಳನ್ನು ಸಹ ಕೇಳಿದರಂತೆ. ಈ ಸಮಯದಲ್ಲಿ ರಿಷಬ್ ಶೆಟ್ಟಿ ಸಹ ಜೊತೆಗೆ ಇದ್ದರು. ಉಡುಪಿ ಮಠಕ್ಕೆ ಭೇಟಿ ನೀಡಿದ್ದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಜೂ ಎನ್ಟಿಆರ್, ಕನ್ನಡದಲ್ಲಿ ಸುಲಲಿತವಾಗಿ ಮಾತನಾಡಿ ಆಶ್ಚರ್ಯ ಮೂಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

