‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು

Updated on: Feb 13, 2025 | 8:32 PM

ಖ್ಯಾತ ನಿರ್ಮಾಪಕ ಕೆ. ಮಂಜು ಅವರು ‘ವಿಷ್ಣುಪ್ರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪುತ್ರ ಶ್ರೇಯಸ್ ಹೀರೋ ಆಗಿ ನಟಿಸಿದ್ದಾರೆ. ವಿ.ಕೆ. ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಕುರಿತು ನಿರ್ಮಾಪಕ ಕೆ. ಮಂಜು ಅವರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ. ಮಂಜು ಅವರು ತಮ್ಮ ಮಗನ ಸಿನಿಮಾಗೆ ‘ವಿಷ್ಣುಪ್ರಿಯಾ’ ಎಂದೇ ಶೀರ್ಷಿಕೆ ಇಟ್ಟಿದ್ದು ವಿಶೇಷ. ಈ ಸಿನಿಮಾ ಹೇಗೆ ಸೆಟ್ಟೇರಿತು? ಈ ಟೈಟಲ್​ ಇಟ್ಟಿದು ಯಾಕೆ ಎಂಬುದನ್ನು ಮಂಜು ಅವರು ವಿವರಿಸಿದ್ದಾರೆ. ‘ಈ ಸಿನಿಮಾದ ಕಥೆಯಲ್ಲಿ ಹೆಣ್ಣಿಗೆ ಬಹಳ ಗೌರವ, ಮಹತ್ವ ಇದೆ. ಈ ಮಣ್ಣಿನ ಹೆಣ್ಣಿಗೆ ವಿಷ್ಣುವರ್ಧನ್​ ಅವರುತುಂಬ ಗೌರವ ನೀಡುತ್ತಿದ್ದರು. ಹಾಗಾಗಿ ಹೀರೋ ಪಾತ್ರಕ್ಕೆ ವಿಷ್ಣು ಎಂದು ಹೆಸರು ಇಟ್ಟೆವು. ನಾಯಕಿ ಹೆಸರು ಪ್ರಿಯಾ. ಆದ್ದರಿಂದ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ ಇಟ್ಟೆವು’ ಎಂದಿದ್ದಾರೆ ಕೆ. ಮಂಜು. ಫೆ.21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಶ್ರೇಯಸ್ ಜೊತೆ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಜೋಡಿಯಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More