‘ಸಿನಿಮಾ ಚೆನ್ನಾಗಿದೆ, ಆದರೆ..’; ‘ತೋತಾಪುರಿ 2’ ನಿರ್ಮಾಪಕ ಸುರೇಶ್ ಮಾತು

|

Updated on: Sep 29, 2023 | 8:37 AM

‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.

‘ತೋತಾಪುರಿ 2’ ಸಿನಿಮಾ (Totapuri Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಮರುದಿನ ಅಂದರೆ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಈ ಬಂದ್ ನಡೆಯುತ್ತಿದೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ