ಮಾಲಾಶ್ರೀ ನಟಿಸಿದ ಸಿನಿಮಾಗಳಲ್ಲಿ ಪುತ್ರಿ ಆರಾಧನಾಗೆ ಯಾವುದು ಹೆಚ್ಚು ಇಷ್ಟ?
ಮಾಲಾಶ್ರೀ ನಟಿಸಿದ ಹಲವು ಸಿನಿಮಾಗಳು ಪ್ರೇಕ್ಷಕರಿಗೆ ಫೇವರಿಟ್. ಅವುಗಳಲ್ಲಿ ಆರಾಧನಾಗೆ ಯಾವುದು ಇಷ್ಟ? ಈ ಪ್ರಶ್ನೆಗೆ ಸ್ವತಃ ಆರಾಧನಾ ಉತ್ತರ ನೀಡಿದ್ದಾರೆ. ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿ ವೇಳೆ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ದರ್ಶನ್ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ.
ಹಿರಿಯ ನಟಿ ಮಾಲಾಶ್ರೀ (Malashree) ಅವರ ಪುತ್ರಿ ಆರಾಧನಾ ಅವರು ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ದರ್ಶನ್ ನಟನೆಯ ‘ಕಾಟೇರ’ (Kaatera) ಸಿನಿಮಾಗೆ ಅವರು ನಾಯಕಿ ಆಗಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಮಾಲಾಶ್ರೀ ನಟಿಸಿದ ಹಲವು ಸಿನಿಮಾಗಳು ಪ್ರೇಕ್ಷಕರಿಗೆ ಫೇವರಿಟ್. ಅವುಗಳಲ್ಲಿ ಆರಾಧನಾಗೆ ಯಾವುದು ಇಷ್ಟ? ಈ ಪ್ರಶ್ನೆಗೆ ಸ್ವತಃ ಆರಾಧನಾ (Aradhanaa) ಉತ್ತರ ನೀಡಿದ್ದಾರೆ. ‘ನಂಜುಂಡಿ ಕಲ್ಯಾಣ’, ‘ರಾಣಿ ಮಹಾರಾಣಿ’ ಮತ್ತು ‘ದುರ್ಗಿ’ ಸಿನಿಮಾಗಳು ತಮಗೆ ಇಷ್ಟ ಎಂದು ಅವರು ಹೇಳಿದ್ದಾರೆ. ‘ಕಾಟೇರ’ ಸಿನಿಮಾಗೆ ಬಹುತೇಕ ಶೂಟಿಂಗ್ ಮುಗಿದಿದೆ. ಈ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us