ಭತ್ತದ ಮೂಟೆ ಹೊತ್ತ ಲಾರಿ ಸಾಗುತ್ತಿರುವಾಗಲೇ ಮೈಸೂರಿನ ಇಟ್ನಾ ಬಳಿ ಕುಸಿದುಬಿದ್ದ ಕಬಿನಿ ಬಲದಂಡೆ ನಾಲೆ ಸೇತುವೆ

Updated on: Aug 06, 2025 | 10:59 AM

ಇಟ್ನಾದ ಸೇತುವೆ ಅಷ್ಟು ದೊಡ್ಡದೇನೂ ಅಲ್ಲ, ಸಾಮಾನ್ಯವಾಗಿ ನಾಲೆಗಳ ಮೇಲೆ ನಿರ್ಮಾಣಗೊಳ್ಳುವ ಸೇತುವೆಗಳು ಚಿಕ್ಕವಾಗಿರುತ್ತವೆ. ಕಬಿನಿ ನಾಲೆಯಲ್ಲಿ ನೀರು ರಭಸದಿಂದ ಹರಿಯುತ್ತಿಲ್ಲ. ಲಾರಿ ಹೆಚ್ಚು ಜಖಂಗೊಂಡಿಲ್ಲ. ಅದರಲ್ಲಿದ್ದ ಭತ್ತದ ಮೂಟೆಗಳನ್ನು ಮತ್ತೊಂದು ಲಾರಿಗೆ ಶಿಫ್ಟ್ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸೇತುವೆ ರಿಪೇರಿಗೆ ಸಮಯ ಹಿಡಿಯಲಿರುವುದರಿಂದ ಸದ್ಯಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆದಂತೆಯೇ.

ಮೈಸೂರು, ಆಗಸ್ಟ್ 6: ಪ್ತಸಕ್ತ ಮಳೆಗಾಲದಲ್ಲಿ ಸೇತುವೆಗಳು ಕುಸಿದುಬೀಳುತ್ತಿರು ಘಟನೆಗಳು ಹೆಚ್ಚು ಸಂಭವಿಸುತ್ತಿವೆ. ಜಿಲ್ಲೆಯ ಸರಗೂರು ತಾಲೂಕಿನ (Sarugur Taluk) ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಮೇಲಿನ ಸೇತುವೆಯ ಮೇಲೆ ಲಾರಿಯೊಂದು ಸಾಗುತ್ತಿದ್ದಾಗ ಅದು ಕುಸಿದು ಅವಘಡ ಸಂಭವಿಸಿದೆ. ನಮ್ಮ ಮೈಸೂರು ವರದಿಗಾರ ನೀಡುವ ಮಾಹಿತಿಯಂತೆ ಭತ್ತದ ಮೂಟೆಗಳನ್ನು ಹೇರಿದ ಲಾರಿಯು ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಹೋಗುತ್ತಿದ್ದಾಗ ಸೇತುವೆ ಹಠಾತ್ತನೆ ಕುಸಿದಿದೆ. ವಾಹನವನ್ನು ಓಡಿಸುತ್ತಿದ್ದ ಚಾಲಕ ಸುರಕ್ಷಿತವಾಗಿದ್ದಾನೆ.

ಇದನ್ನೂ ಓದಿ:   ದೆಹಲಿ-ಜಮ್ಮು ರೈಲ್ವೆ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ರೈಲು ಬಚಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ