ಕಬ್ಜ (Kabzaa) ಸಿನಿಮಾ ಮೂಲಕ ಆರ್.ಚಂದ್ರು (R Chandru) ದೊಡ್ಡ ಗೆಲುವು ಸಾಧಿಸಿದ್ದಾರೆ. ಚಂದ್ರು ಪಾಲಿಗೆ ಈ ಗೆಲುವು ಬಹಳ ಮಹತ್ವದ್ದು. ಈ ಗೆಲುವು ಅವರ ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರು ಎದುರಿಸಿದ ಅವಮಾನಗಳಿಗೆ ಕೊಟ್ಟ ದಿಟ್ಟ ಉತ್ತರ. ಹಾಗಾಗಿ ಸಹಜವಾಗಿಯೇ ಈ ಗೆಲುವು ಅವರನ್ನು ಭಾವುಕರನ್ನಾಗಿಸಿದೆ. ಸಿನಿಮಾದ ಗೆಲುವಿನ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್.ಚಂದ್ರು, ಚಿತ್ರೀಕರಣದ ಸಂದರ್ಭದಲ್ಲಿ ತಾವೆದುರಿಸಿದ ಕಷ್ಟಗಳ ನೆನೆದು ಕಣ್ಣೀರು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ