ಮುದ್ದಿನ ‘ಕ್ಯಾಂಡಿ’ ಕಳೆದುಕೊಂಡು ಕಣ್ಣೀರಿಡುತ್ತಿರುವ ಕುಟುಂಬಸ್ಥರು, ವಿಧಿ ವಿಧಾನದೊಂದಿಗೆ ಶ್ವಾನದ ಅಂತ್ಯಕ್ರಿಯೆ

| Updated By: ಆಯೇಷಾ ಬಾನು

Updated on: Oct 15, 2022 | 10:44 AM

ತಮ್ಮ ಪ್ರೀತಿಯ ಶ್ವಾನ ಹೃದಯಾಘಾತದಿಂದ ಮೃತಪಟ್ಟಿದ್ದಕ್ಕೆ ಇಡೀ ಕುಟುಂಬ ಬಿಕ್ಕಿ ಬಿಕ್ಕಿ ಅತ್ತು ಶ್ವಾನಕ್ಕೆ ಕಣ್ಣೀರ ವಿದಾಯ ಹೇಳಿರುವ ಘಟನೆ ನಡೆದಿದೆ.

ಕಲಬುರಗಿ: ಕನ್ನಡದ ಚಾರ್ಲಿ ಸಿನಿಮಾ ತೆರೆ ಕಂಡ ನಂತರ ಮೂಖ ಪ್ರಾಣಿಗಳನ್ನು ತಿರಸ್ಕರಿಸುವವರ ಮನಸಲ್ಲಿ ಪ್ರೀತಿ ಹುಟ್ಟಿದೆ. ಸದ್ಯ ಕಲಬುರಗಿಯಲ್ಲಿ ತಮ್ಮ ಪ್ರೀತಿಯ ಶ್ವಾನ ಹೃದಯಾಘಾತದಿಂದ ಮೃತಪಟ್ಟಿದ್ದಕ್ಕೆ ಇಡೀ ಕುಟುಂಬ ಬಿಕ್ಕಿ ಬಿಕ್ಕಿ ಅತ್ತು ಶ್ವಾನಕ್ಕೆ ಕಣ್ಣೀರ ವಿದಾಯ ಹೇಳಿರುವ ಘಟನೆ ನಡೆದಿದೆ. ಕಲಬುರಗಿ ‌ನಗರದ ನ್ಯೂವ್ ರಾಘವೇಂದ್ರ ಕಾಲೋನಿಯಲ್ಲಿರುವ ಮೋಹನ‌ ಕುಲಕರ್ಣಿ ಎಂಬುವರಿಗೆ ಸೇರಿದ, ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕ್ಯಾಂಡಿ ಎಂಬ ಶ್ವಾನ ಹೃದಯಾಘಾತದಿಂದ ಮೃತಪಟ್ಟಿದೆ. ಈ ಶ್ವಾನವನ್ನು ಸುಮಾರು 6 ವರ್ಷಗಳಿಂದ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದರು. ವಿಧಿವಿಧಾನದೊಂದಿಗೆ ಶ್ವಾನದ ಅಂತ್ಯಕ್ರಿಯೆ ಮಾಡಲಾಗಿದೆ.

Published on: Oct 15, 2022 10:44 AM