Kalaburagi: ಆಳಂದ್ ಪಟ್ಟಣದ ಲಾಡ್ಲಾ ಮಶಾಕ್ ದರ್ಗಾದಲ್ಲಿ ಶಿವಪೂಜೆ, ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಕಳೆದ ವರ್ಷ ನಡೆದ ದುರ್ಘಟನೆ ಮರುಕಳಿಸದಂತಿರಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಖುದ್ದು ಸ್ಥಳದಲ್ಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.
ಕಲಬುರಗಿ: ದರ್ಗಾದೊಳಗೆ ದೇವಸ್ಥಾನ ಅಥವಾ ದೇವಸ್ಥಾನದ ಬಳಿ ದರ್ಗಾವಿದ್ದರೆ ವಿವಾದ, ಗಲಾಟೆ ತಪ್ಪಿದಲ್ಲ. ಜಲ್ಲೆಯ ಆಳಂದ್ ಪಟ್ಟಣದಲ್ಲಿ ಲಾಡ್ಲಾ ಮಶಾಕ್ ದರ್ಗಾದೊಳಗೆ (Ladla Mashaque Dargah) ರಾಘವ ಚೈತನ್ಯ ಶಿವಲಿಂಗವಿದೆ (Shivling). ಕಳೆದ ವರ್ಷ ಶಿವಭಕ್ತರು ಅಲ್ಲಿ ಮಹಾಶಿವರಾತ್ರಿ ಆಚರಿಸುವಾಗ ಗಲಾಟೆ ತಲೆದೋರಿ ಕಲ್ಲು ತೂರಾಟ ನಡೆದಿತ್ತು. ಹಾಗಾಗಿ ಪ್ರಕರಣ ಕೋರ್ಟಿನ ಮೆಟ್ಟಿಲೇರಿತ್ತು. ಕಲಬುರಗಿಯ ಹೈಕೋರ್ಟ್ ಪೀಠ ವಿಚಾರಣೆ ನಡೆಸಿ ಶಿವರಾತ್ರಿಯಂದು ಅಂದರೆ ಇಂದು ಶಿವಪೂಜೆ ನಡೆಸಲು ಅನುಮತಿ ನೀಡಿದೆ. ಕಳೆದ ವರ್ಷ ನಡೆದ ದುರ್ಘಟನೆ ಮರುಕಳಿಸದಂತಿರಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಖುದ್ದು ಸ್ಥಳದಲ್ಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ. ಕಡಗಂಚಿ ಶ್ರೀಗಳು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ಇಂದು ಶಿವಪೂಜೆ ನಡೆಯಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ