Mahashivarathri: ಕೋಲಾರ ಕೆಜಿಎಫ್ ನಲ್ಲಿರುವ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಅಸಂಖ್ಯಾತ ಶಿವಭಕ್ತರು

Mahashivarathri: ಕೋಲಾರ ಕೆಜಿಎಫ್ ನಲ್ಲಿರುವ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಅಸಂಖ್ಯಾತ ಶಿವಭಕ್ತರು

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 18, 2023 | 12:08 PM

ಇಂದು ಮಹಾಶಿವರಾತ್ರಿ ಆಚರಣೆ ಅಗಿರುವುದರಿಂದ ಭಕ್ತರು ಸಾಗರೋಪಾದಿಯಲ್ಲಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಾದಿಗಳಿಗಾಗಿ ಮಹಾಮಂಗಳಾರತಿಯ ವ್ಯವಸ್ಥೆ ಮಾಡಲಾಗಿದೆ.

ಕೋಲಾರ: ಜಿಲ್ಲೆಯ ಕೋಲಾರ ಗೋಲ್ಡ್ ಪೀಲ್ಡ್ಸ್ (Kolar Gold Fields) ತಾಲ್ಲೂಕಿನ ಕಮ್ಮಸಂದ್ರದಲ್ಲಿರುವ ಕೋಟಿಲಿಂಗೇಶ್ವರ ದೇವಸ್ಥಾನ ಕೋಟಿ ಲಿಂಗಗಳ ಪವಿತ್ರ ಸ್ಥಳ. ಇಂದು ಬಿಡಿ ಮಹಾಶಿವರಾತ್ರಿ ಆಚರಣೆ ಅಗಿರುವುದರಿಂದ ಭಕ್ತರು ಸಾಗರೋಪಾದಿಯಲ್ಲಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, ಮಿಕ್ಕಿದ ದಿನಗಳಲ್ಲೂ ಕೋಟಿಲಿಂಗೇಶ್ವರದಲ್ಲಿ ನೂರಾರು ಶಿವಭಕ್ತರು (Shivbhakts) ನೆರೆದಿರುತ್ತಾರೆ. ಈ ಸ್ಥಳದ ಖ್ಯಾತಿ ಅಂಥದ್ದು. ಇವತ್ತು ಇಲ್ಲಿ ಕಾಣುತ್ತಿರುವ ಭಕ್ತರು ಕೇವಲ ಕರ್ನಾಟಕದವರಲ್ಲ, ನೆರೆರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ (Telangana) ಮತ್ತು ಮಹಾರಾಷ್ಟ್ರಗಳಿಂದ ಆಗಮಿಸಿದವರೂ ಇದ್ದಾರೆ. ಭಕ್ತಾದಿಗಳಿಗಾಗಿ ಮಹಾಮಂಗಳಾರತಿಯ ವ್ಯವಸ್ಥೆ ಮಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 18, 2023 12:08 PM