ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಅಭ್ಯರ್ಥಿ: ಕಲಬುರಗಿ ಪರೀಕ್ಷಾ ಕೇಂದ್ರದ ಬಳಿ ಮಹಿಳೆ ಎಡವಟ್ಟು
ಕಲಬುರಗಿಯಲ್ಲಿ ಕೆಎಎಸ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಕಳೆದ ತಿಂಗಳ ವಿಎಒ ಪರೀಕ್ಷೆಯ ಹಾಲ್ ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಾಪಸ್ ತೆರಳಿದ್ದಾರೆ. ಸಣ್ಣ ಎಡವಟ್ಟಿನಿಂದ ಪರೀಕ್ಷೆ ತಪ್ಪಿಸಿಕೊಂಡು ನಿರಾಶೆಗೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭ್ಯರ್ಥಿಗಳಿಗೆ ಇದು ಮತ್ತಷ್ಟು ಸಂಕಷ್ಟ ತಂದಿದೆ.
ಕಲಬುರಗಿ, ನವೆಂಬರ್ 15: ಭಾನುವಾರ ರಾಜ್ಯದ 345 ಪರೀಕ್ಷಾ ಕೇಂದ್ರಗಳಲ್ಲಿ KPSCಯಿಂದ 319 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ನಡೆಯುತ್ತಿದೆ. ಹೀಗಿರುವಾಗ ಕೆಲ ವಿದ್ಯಾರ್ಥಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಕಲಬುರಗಿಯ ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿ ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತೆಗೆದುಕೊಂಡು ಬಂದಿದ್ದಾರೆ. ವಿಎಓ ಪರೀಕ್ಷೆ ಕಳೆದ ತಿಂಗಳೇ ಮುಗಿದೆ. ಪರೀಕ್ಷಾ ಕೇಂದ್ರದ ಬಳಿಕ ಹಾಲ್ ಟಿಕೆಟ್ ನೋಡಿ ಕಂಗಾಲಾದ ಅಭ್ಯರ್ಥಿ ವಾಪಸ್ ಹೋದರು. ಅದೇ ರೀತಿಯಾಗಿ ಪರೀಕ್ಷಾ ಆರಂಭ ಸಮಯ ಮುಗಿದ ಮೇಲೆ ಓರ್ವ ಅಭ್ಯರ್ಥಿ ಬಂದಿದ್ದಾರೆ. ಆಳಂದದಿಂದ ಬಂದಿದ್ದ ಮಹಿಳಾ ಅಭ್ಯರ್ಥಿಯನ್ನ ಪರೀಕ್ಷಾ ಕೇಂದ್ರದ ಒಳಗಡೆ ಬಿಡುವುದಕ್ಕೆ ನಿರಾಕರಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
