ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಹಾಸ್ಟೆಲ್‌ನಲ್ಲಿ ಉಳಿಯಬೇಕಿದ್ದ ನಾಲ್ವರು ವಿದ್ಯಾರ್ಥಿನಿಯರು ಆಟೋ ಹತ್ತಿದರು. ಆದರೆ, ಆಟೋದಲ್ಲಿ ಪ್ರಯಾಣ ಮಾಡುವಾಗ ಒಬ್ಬೊಬ್ಬರಾಗಿ ಕೆಳಗೆ ಬಿದ್ದರು. ಅವರಲ್ಲಿ ಮೂವರು ಬದುಕುಳಿದರು. ಆದರೆ, ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಒಬ್ಬಳು ವಿದ್ಯಾರ್ಥಿ ಸಾವನ್ನಪ್ಪಿದ್ದಾಳೆ. ಕಾಮರೆಡ್ಡಿ ಜಿಲ್ಲೆಯ ಬೋರ್ಲಂ ಗುರುಕುಲ ಶಾಲೆಯಲ್ಲಿ ಈ ದುರಂತ ನಡೆದಿದೆ.
ಕಾಮರೆಡ್ಡಿ, ಜನವರಿ 26: ತೆಲಂಗಾಣದಲ್ಲಿ ವಿಚಿತ್ರವಾದ ರೀತಿಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಗುರುಕುಲದ ಹಾಸ್ಟೆಲ್‌ನಲ್ಲಿ ಇರಬೇಕಾದ ನಾಲ್ವರು ವಿದ್ಯಾರ್ಥಿನಿಯರು ಆಟೋ ಹತ್ತಿದರು. ಆದರೆ, ಆಟೋದಲ್ಲಿ ಪ್ರಯಾಣ ಮಾಡುವಾಗ ಒಬ್ಬೊಬ್ಬರಾಗಿ ಕೆಳಗೆ ಬಿದ್ದರು. ಅವರಲ್ಲಿ ಮೂವರು ಬದುಕುಳಿದರು. ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ಎಂಬ ಒಬ್ಬಳು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕಾಮರೆಡ್ಡಿ ಜಿಲ್ಲೆಯ ಬೋರ್ಲಂ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಗುರುಕುಲ ಶಾಲೆಯಲ್ಲಿ ನಿಜಕ್ಕೂ ಏನಾಯಿತು? ಆ ವಿದ್ಯಾರ್ಥಿನಿಯರು ಆಟೋ ಹತ್ತಿದ್ದು ಏಕೆ? ಅವರು ಹೇಗೆ ಕೆಳಗೆ ಬಿದ್ದರು? ಅವರಾಗಿಯೇ ಹಾರಿದರಾ? ಅಥವಾ ಯಾರಾದರೂ ತಳ್ಳಿದರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆ ವಿದ್ಯಾರ್ಥಿನಿಯರು ಆಟೋದಿಂದ ಕೆಳಗೆ ಹಾರುವುದು, ಅವರು ಬಿದ್ದರೂ ಆಟೋ ನಿಲ್ಲದೆ ಮುಂದೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾನಸ, ಅಂಜಲಿ, ವೈಶಾಲಿ ಮತ್ತು ಸಂಗೀತ ಚಲಿಸುತ್ತಿದ್ದ ಆಟೋದಿಂದ ಹಾರಿದರು. ಸಂಗೀತಾಳ ತಲೆಗೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸಾವನ್ನಪ್ಪಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ