ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ಇಂದು ಕನ್ನಡ ರಾಜ್ಯೋತ್ಸವ, ಕನ್ನಡದ ಹಬ್ಬ ಆಚರಿಸುವ ವಿಶೇಷ ದಿನ. ಆದರೆ ಇದೇ ದಿನ ಬೆಂಗಳೂರಿನ ಕೆಲ ಮಾಲ್ಗಳು, ಚಿತ್ರಮಂದಿರಗಳು ಹಿಂದಿ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿವೆ. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಗಲಾಟೆ ಮಾಡಿವೆ.
ಇಂದು (ನವೆಂಬರ್ 01) ಕನ್ನಡ ರಾಜ್ಯೋತ್ಸವ. ಕನ್ನಡ ಭಾಷೆಯ ಹಿರಿಮೆ, ಗರಿಮೆ ಸಾರಲು ಭಾಷೆಯ ಬಗ್ಗೆ ಅಭಿಮಾನ, ಹೆಮ್ಮೆ ಪಡುವ ವಿಶೇಷ ದಿನ. ಆದರೆ ಇದೇ ದಿನದಂದು ಬೆಂಗಳೂರಿನ ಕೆಲವು ಮಾಲ್ಗಳಲ್ಲಿ, ಕೆಲವು ಚಿತ್ರಮಂದಿರಗಳಲ್ಲಿ ಹಿಂದಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ಹಿಂದಿಯ ‘ಸಿಂಗಂ ಅಗೇನ್’ ಹಾಗೂ ‘ಭೂಲ್ ಭೂಲಯ್ಯ 3’ ಸಿನಿಮಾಗಳು ಬಿಡುಗಡೆ ಆಗಿದ್ದು, ಬೆಂಗಳೂರಿನ ಹಲವು ಮಾಲ್ಗಳಲ್ಲಿ ಈ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿಯೂ ಸಿಂಗಂ ಅಗೇನ್ ಸಿನಿಮಾದ ವಿತರಣೆಯನ್ನು ಪಿವಿಆರ್ ತೆಗೆದುಕೊಂಡಿರುವ ಕಾರಣ ತಮ್ಮ ಪಿವಿಆರ್-ಐನಾಕ್ಸ್ ಸ್ಕ್ರೀನ್ಗಳಲ್ಲಿ ಅದನ್ನೇ ಹೆಚ್ಚಾಗಿ ಪ್ರದರ್ಶಿಸುತ್ತಿದೆ. ಕನ್ನಡ ರಾಜ್ಯೋತ್ಸವದಂದು ಹಿಂದಿ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಕನ್ನಡ ಪರ ಸಂಘಟನೆ ಸದಸ್ಯರು ಕೆಲ ಮಾಲ್ಗಳ ಮುಂದೆ ಪ್ರತಿಭಟನೆ, ಗಲಾಟೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

