‘ಕೆರೆಬೇಟೆ ಕಥೆ ಬಿಟ್ಟುಕೊಡಬಾರದು ಅಂತ ಹೆಚ್ಚು ಹಣ ಕೊಟ್ಟಿದ್ದಾರೆ’: ಗೋಪಾಲಕೃಷ್ಣ ದೇಶಪಾಂಡೆ

|

Updated on: Mar 10, 2024 | 6:26 PM

ಟ್ರೇಲರ್​ ನೋಡಿದ ಬಳಿಕ ‘ಕೆರೆಬೇಟೆ’ ಸಿನಿಮಾದ ಕಥೆ ಏನು ಎಂಬ ಬಗ್ಗೆ ಕೌತುಕ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಹೊಸ ಸಾಂಗ್​ ರಿಲೀಸ್​ ವೇಳೆ ಅವರು ಸಿನಿಮಾ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಚ್​ 15ರಂದು ತೆರೆಕಾಣಲಿರುವ ಈ ಚಿತ್ರದಲ್ಲಿ ಮಲೆನಾಡಿನ ಕಥೆ ಇದೆ.

ಮಾರ್ಚ್​ 15ರಂದು ‘ಕೆರೆಬೇಟೆ’ ಸಿನಿಮಾ (Kerebete Movie) ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಗೌರಿಶಂಕರ್​ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ಪೋಷಕ ನಟ ಗೋಪಾಲಕೃಷ್ಣ ದೇಶಪಾಂಡೆ ಕೂಡ ಅಭಿಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡು ಬಿಡುಗಡೆ ಆಯಿತು. ಈ ವೇಳೆ ಮಾತನಾಡಿದ ಗೋಪಾಲಕೃಷ್ಣ ದೇಶಪಾಂಡೆ (Gopal Deshpande) ಅವರು ತಮ್ಮ ಪಾತ್ರದ ಬಗ್ಗೆ ಕಿರುಪರಿಚಯ ನೀಡಿದರು. ಆದರೆ ಕಥೆ ಬಗ್ಗೆ ಅವರು ಏನನ್ನೂ ಬಿಟ್ಟುಕೊಡಲಿಲ್ಲ. ‘ಈ ಸಿನಿಮಾದ ಕಥೆ ಬಿಟ್ಟುಕೊಡಬಾರದು ಅಂತ ನನಗೆ ಹೆಚ್ಚುವರಿ ಹಣ ನೀಡಿದ್ದಾರೆ’ ಎಂದು ಅವರು ನಕ್ಕರು. ‘ಕರೆಬೇಟೆ’ ಸಿನಿಮಾದ ಶೂಟಿಂಗ್​ ಸಾಗರ, ಸೊರಬ, ತೀರ್ಥಹಳ್ಳಿ ಮುಂತಾದ ಕಡೆಗಳಲ್ಲಿ ಮಾಡಲಾಗಿದೆ. ಈ ಚಿತ್ರದಲ್ಲಿ ಕಥಾನಾಯಕಿಯ ತಂದೆಯ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ನಟಿಸಿದ್ದಾರೆ. ರಾಜ್​ಗುರು ಅವರು ನಿರ್ದೇಶನ ಮಾಡಿದ್ದು, ಗಗನ್​ ಬಡೇರಿಯಾ ಸಂಗೀತ ನೀಡಿದ್ದಾರೆ. ‘ಜನಮನ ಸಿನಿಮಾಸ್​’ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.