ನಿಧನಕ್ಕೂ ಮುನ್ನ ಹೇಗಿತ್ತು ಉಮೇಶ್ ಪರಿಸ್ಥಿತಿ: ವಿವರಿಸಿದ ಮಗಳು
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಉಮೇಶ್ ಅವರು 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಗೆ ಕುಟುಂಬದವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಉಮೇಶ್ ಅವರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವರ ಪುತ್ರಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಉಮೇಶ್ (MS Umesh) ಅವರು 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಗೆ ಕುಟುಂಬದವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕ್ಯಾನ್ಸರ್ (Cancer) ಪೀಡಿತರಾಗಿದ್ದ ಉಮೇಶ್ ಅವರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವರ ಪುತ್ರಿ ವಿವರಿಸಿದ್ದಾರೆ. ‘ಅಕ್ಟೋಬರ್ 10ರಿಂದ ಅವರಿಗೆ ಹುಷಾರಿರಲಿಲ್ಲ. ಆಗ ಅವರಿಗೆ 4ನೇ ಹಂತದ ಕ್ಯಾನ್ಸರ್ ಆಗಿದೆ ಎಂಬುದು ಗೊತ್ತಾಯಿತು. ನವೆಂಬರ್ 14ರಂದು ಕಿದ್ವಾಯಿ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ನಿನ್ನೆ ರಮೇಶ್ ಭಟ್ ಅವರು ಬಂದುಹೋದರು. ಮಾತು ಸಂಪೂರ್ಣ ನಿಂತುಹೋಗಿತ್ತು. ಕೇವಲ ಸನ್ನೆ ಮಾಡುತ್ತಿದ್ದರು. ಮನೆಯಲ್ಲಿ ತಾಯಿ ಇದ್ದಾರೆ. ಅವರಿಗೆ ಲೋ ಬಿಪಿ ಆಗಿದೆ. ಅವರು ಮನೆಯಲ್ಲಿ ಕಾಯುತ್ತಿದ್ದಾರೆ’ ಎಂದು ಉಮೇಶ್ ಅವರ ಪುತ್ರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
