ವಿಷ್ಣು ಸರ್ ಎದುರು ನಾವು ಗಂಡಸರಿಗೆ ಶೇಕ್ ಹ್ಯಾಂಡ್ ಮಾಡುವಂತಿರಲಿಲ್ಲ: ತಾರಾ
ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಲಾಗಿದೆ. ಆ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ತಾರಾ ಅವರು ಕೂಡ ಈ ಕುರಿತು ಮಾತನಾಡಿದ್ದಾರೆ. ವಿಷ್ಣುವರ್ಧನ್ ಅವರ ಜೊತೆಗಿನ ಒಡನಾಟವನ್ನು ತಾರಾ ಅವರು ನೆನಪಿಸಿಕೊಂಡಿದ್ದಾರೆ.
ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿಯನ್ನು ನೀಡಲಾಗಿದೆ. ಆ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ತಾರಾ ಅವರು ಕೂಡ ಈ ಕುರಿತು ಮಾತನಾಡಿದ್ದಾರೆ. ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ಒಡನಾಟವನ್ನು ತಾರಾ ಅವರು ನೆನಪಿಸಿಕೊಂಡಿದ್ದಾರೆ. ‘ನಮ್ಮನ್ನು ಕೂಡ ಅವರು ತಮ್ಮ ಮನೆಯ ಹೆಣ್ಮಕ್ಕಳ ರೀತಿ ಕಾಣುತ್ತಿದ್ದರು. ಸಣ್ಣ ಸಣ್ಣ ವಿಚಾರಗಳನ್ನು ತಿದ್ದುತ್ತಿದ್ದರು. ಹಣೆಗೆ ಕುಂಕುಮ ಇಲ್ಲದಿದ್ದರೆ ಪ್ರಶ್ನಿಸುತ್ತಿದ್ದರು. ವಿಷ್ಟು ಸರ್ ಇದ್ದಾಗ ಗಂಡಸರಿಗೆ ನಾವು ಶೇಕ್ ಹ್ಯಾಂಡ್ ಮಾಡುವಂತಿರಲಿಲ್ಲ. ನಮಸ್ಕಾರ ಮಾಡಬೇಕಿತ್ತು’ ಎಂದು ತಾರಾ (Tara Anuradha) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
