ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು? ವಿವರಿಸಿದ ಪತ್ನಿ
‘ಪಾತ್ರಧಾರಿ’ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ಸಂಗೀತ್ ಸಾಗರ್ ಅವರು ನಿಧನರಾದರು. ಹೃದಯಾಘಾತದಿಂದ ಅವರು ಮೃತರಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಅವರ ಪತ್ನಿ ಸ್ಮಿತಾ ಸಾಗರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ನಮಗೆ ಮೃತ ದೇಹ ಕೊಟ್ಟಿಲ್ಲ’ ಎಂದು ಸ್ಮಿತಾ ಅವರು ಹೇಳಿದ್ದಾರೆ.
‘ಪಾತ್ರಧಾರಿ’ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ಸಂಗೀತ್ ಸಾಗರ್ (Sangeeth Sagar) ಅವರು ನಿಧನರಾದರು. ಹೃದಯಾಘಾತದಿಂದ (Heart Attack) ಅವರು ಮೃತರಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಅವರ ಪತ್ನಿ ಸ್ಮಿತಾ ಸಾಗರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮದು ಮೈಸೂರು. ನಾವು ಮದುವೆ ಆಗಿ 24 ವರ್ಷ ಆಯಿತು. ನಮ್ಮ ಮನೆಯವರ ಊರು ಸಕಲೇಶಪುರ. ಸಂಗೀತ್ ಸಾಗರ್ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಆಮೇಲೆ ಸಿನಿಮಾ ನಿರ್ದೇಶನ ಶುರು ಮಾಡಿದರು. ಈಗ ಅವರು ‘ಪಾತ್ರಧಾರಿ’ ಸಿನಿಮಾಗೆ ಸಂಗೀತ ನೀಡಿ, ನಿರ್ದೇಶನ ಮಾಡುತ್ತಿದ್ದರು. ಶೃಂಗೇರಿ ಸುತ್ತಮುತ್ತ ಶೂಟಿಂಗ್ ಅಂತ ಹೇಳಿದ್ದರು. ಆದರೆ ನಿಖರವಾಗಿ ಜಾಗ ನನಗೆ ಗೊತ್ತಿರಲಿಲ್ಲ. ನಿನ್ನೆ ಸಾಗರ್ ಅವರಿಗೆ ತುಂಬಾ ಸುಸ್ತಾಗಿದೆ, ಬಾಯಲ್ಲಿ ರಕ್ತ ಬಂದಿದೆ, ಬೆವೆತು ಹೋಗಿದ್ದಾರೆ, ಕೈ ಕಾಲು ನಡುಗುತ್ತಿದೆ ಅಂತ ನನಗೆ ಕರೆ ಬಂತು. ಪಕ್ಕದ ಕ್ಲಿನಿಕ್ಗೆ ಕರೆದುಕೊಂಡು ಹೋಗಿದ್ದರು. ಅವರಿಗೆ ಹಾರ್ಟ್ ಸಮಸ್ಯೆ, ಬಿಪಿ, ಶುಗರ್ ಇದೆ ಅಂತ ವೈದ್ಯರಿಗೆ ಹೇಳಿದ್ದೆ. ಇನ್ನೂ ನಮಗೆ ಪಾರ್ಥಿವ ಶರೀರ ಕೊಟ್ಟಿಲ್ಲ’ ಎಂದು ಸಂಗೀತ್ ಸಾಗರ್ ಪತ್ನಿ ಸ್ಮಿತಾ ಸಾಗರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
