ಲೋಕಸಭಾ ಚುನಾವಣೆ ಫಲಿತಾಂಶ: ಸೋಲನ್ನು ಸ್ಪೋರ್ಟ್ ಆಗಿ ಸ್ವೀಕರಿಸಿರುವ ಡಿಕೆ ಸುರೇಶ್ ಗೆದ್ದ ಡಾ ಮಂಜುನಾಥ್ ರನ್ನು ಅಭಿನಂದಿಸಿದರು

|

Updated on: Jun 04, 2024 | 3:00 PM

ಪಕ್ಷದ ಕಾರ್ಯಕರ್ತರು ತನಗಾಗಿ ಬಹಳ ದುಡಿದಿದ್ದಾರೆ, ಆದರೆ ಸೋಲಿನಿಂದ ಧೃತಿಗೆಡುವ ಅವಶ್ಯಕತೆಯಿಲ್ಲ, ಅವರೊಂದಿಗೆ ತಾನು ಬೆಳೆದಿದ್ದೇನೆ ಮತ್ತು ಇನ್ನು ಮುಂದೆಯೂ ಅವರೊಂದಿಗೆ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದರು. ಗೆದ್ದಿರುವ ಮಂಜುನಾಥ್ ಅವರಿಂದ ಕ್ಷೇತ್ರಕ್ಕೆ ಒಳ್ಳೆಯದಾಗಲಿ ಮತ್ತು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನುಭವಿಸಿರುವ ಸೋಲನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಕ್ರೀಡಾ ಮನೋಭಾವದೊಂದಿಗೆ ಸ್ವೀಕರಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಜನರ ತೀರ್ಪಿಗೆ ತಲೆಬಾಗುತ್ತೇನೆ ಮತ್ತು ಡಾ ಸಿಎನ್ ಮಂಜುನಾಥ್ (Dr CN Manjunath) ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಸ್ಪರ್ಧಿಸುವ ಜವಾಬ್ದಾರಿ ಮತ್ತು ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ (Sonia Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ರಾಜ್ಯದ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಸುರೇಶ್, ಪಕ್ಷದ ಕಾರ್ಯಕರ್ತರು ತನಗಾಗಿ ಬಹಳ ದುಡಿದಿದ್ದಾರೆ, ಆದರೆ ಸೋಲಿನಿಂದ ಧೃತಿಗೆಡುವ ಅವಶ್ಯಕತೆಯಿಲ್ಲ, ಅವರೊಂದಿಗೆ ತಾನು ಬೆಳೆದಿದ್ದೇನೆ ಮತ್ತು ಇನ್ನು ಮುಂದೆಯೂ ಅವರೊಂದಿಗೆ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದರು. ಗೆದ್ದಿರುವ ಮಂಜುನಾಥ್ ಅವರಿಂದ ಕ್ಷೇತ್ರಕ್ಕೆ ಒಳ್ಳೆಯದಾಗಲಿ ಮತ್ತು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಲ ರಾಜಕಾರಣಿಗಳು ಬಲಿಯಜ್ಞ ಮೊದ್ಲಿಂದ ಮಾಡಿಕೊಂಡು ಬಂದಿದ್ದಾರೆ; ತಂತ್ರ, ಮಂತ್ರ, ಕುತಂತ್ರ ಅವರಿಗೆ ಹೊಸದಲ್ಲ: ಡಿಕೆ ಸುರೇಶ್