ಲೋಕಸಭಾ ಚುನಾವಣೆ ಫಲಿತಾಂಶ; ಕುಮಾರಸ್ವಾಮಿ ನನ್ನನ್ನು ತಮ್ಮ ಪಕ್ಷದ ಅಭ್ಯರ್ಥಿಯಂತೆ ಭಾವಿಸಿ ಪ್ರಚಾರ ಮಾಡಿದರು: ಡಾ ಕೆ ಸುಧಾಕರ್
ಲೋಕಸಭಾ ಚುನಾವಣೆ ಫಲಿತಾಂಶ: ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತನ್ನ ಗೆಲುವಿಗಾಗಿ ಅತೀವ ಶ್ರಮಪಟ್ಟಿದ್ದಾರೆ, ಅದರ ಜೊತೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತನ್ನನ್ನು ಬಿಜೆಪಿ ಅಭ್ಯರ್ಥಿಯೆಂದು ಪರಿಗಣಿಸದೆ, ತಮ್ಮ ಪಕ್ಷದ ಅಭ್ಯರ್ಥಿ ಎಂದು ಭಾವಿಸಿ ಮತ ಯಾಚಿಸಿದ್ದಾರೆ, ಅವರ ಉಪಕಾರ ಬಹಳ ದೊಡ್ಡದು ಎಂದು ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸೋತು ಹತಾಷರಾಗಿದ್ದ ಡಾ ಕೆ ಸುಧಾಕರ್ (Dr K Sudhakar) ಖುಷಿಯಿಂದ ಬೀಗತ್ತಿದ್ದಾರೆ ಮಾರಾಯ್ರೇ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಐದು ಸುತ್ತಿನ ಮತೆ ಎಣಿಕೆ ಕಾರ್ಯ ಮುಗಿದ ಬಳಿಕ 30,000 ಕ್ಕಿಂತ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೀಡ್ ನಲ್ಲಿದ್ದೇನೆ, ಗೆಲ್ಲುವ ನಿರೀಕ್ಷೆ ಬಲಗೊಳ್ಳುತ್ತಿದೆ, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿಗಬೇಕೆನ್ನುವುದು ಕೋಟ್ಯಾಂತರ ಭಾರತೀಯರ ಆಸೆಯಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಚಿಕ್ಕಬಳ್ಳಾಪುರದ ಬಗ್ಗೆ ಮಾತಾಡಿದ್ದು ಅದು ಸಾಕಾರಗೊಳ್ಳಲಿದೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತನ್ನ ಗೆಲುವಿಗಾಗಿ ಅತೀವ ಶ್ರಮಪಟ್ಟಿದ್ದಾರೆ, ಅದರ ಜೊತೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತನ್ನನ್ನು ಬಿಜೆಪಿ ಅಭ್ಯರ್ಥಿಯೆಂದು ಪರಿಗಣಿಸದೆ, ತಮ್ಮ ಪಕ್ಷದ ಅಭ್ಯರ್ಥಿ ಎಂದು ಭಾವಿಸಿ ಮತ ಯಾಚಿಸಿದ್ದಾರೆ, ಅವರ ಉಪಕಾರ ಬಹಳ ದೊಡ್ಡದು ಎಂದು ಸುಧಾಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮಿತ್ ಶಾ ಸಂಧಾನ ಸಫಲ, ಮುನಿಸು ಮರೆತು ಮರೆತು ಒಂದಾದ ಎಸ್ ಆರ್ ವಿಶ್ವನಾಥ್ ಮತ್ತು ಡಾ ಕೆ ಸುಧಾಕರ್