ಅಮಿತ್ ಶಾ ಸಂಧಾನ ಸಫಲ, ಮುನಿಸು ಮರೆತು ಮರೆತು ಒಂದಾದ ಎಸ್ ಆರ್ ವಿಶ್ವನಾಥ್ ಮತ್ತು ಡಾ ಕೆ ಸುಧಾಕರ್
ಆದರೆ ಬಿಜೆಪಿಯ ಚಾಣಕ್ಕ ಅಮಿತ್ ಶಾ ನಿನ್ನೆ ಅವರಿಬ್ಬರೊಂದಿಗೆ ಮಾತಾಡಿದ ಪರಿಣಾಮವಾಗಿ ಮುನಿಸು ಅಂತ್ಯಕಂಡಿದೆ. ಇಂದು ಬೆಳ್ಳಂಬೆಳಗ್ಗೆಯೇ ಡಾ ಸುಧಾಕರ್ ಬೋಕೆಯೊಂದಿಗೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆ ಕದ ತಟ್ಟಿದರು.
ಬೆಂಗಳೂರು: ನಿನ್ನೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನಡೆಸಿದ ಸಂಧಾನ ಫಲ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಡಾ ಕೆ ಸುಧಾಕರ್ (Dr K Sudhakar) ಮತ್ತು ಆ ಕ್ಷೇತ್ರವನ್ನು ತನ್ನ ಮಗನಿಗೆ ಗಿಟ್ಟಿಸಿಕೊಳ್ಳಬೇಕೆಂದುಕೊಂಡಿದ್ದ ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ನಡುವೆ ಮುಸುಕಿನ ಗುದ್ದಾಟವಲ್ಲ ಬಹಿರಂಗವಾಗೇ ವಾಕ್ಸಮರ ನಡೆದಿತ್ತು. ಪರಸ್ಪರ ವಾಗ್ದಾಳಿಗಳನ್ನು ನಡೆಸಿದ್ದರು ಮತ್ತು ಪ್ರಚಾರಕ್ಕೆ ಹೋಗಲ್ಲ ಅಂತ ವಿಶ್ವನಾಥ್ ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿಯ ಚಾಣಕ್ಕ ಅಮಿತ್ ಶಾ ನಿನ್ನೆ ಅವರಿಬ್ಬರೊಂದಿಗೆ ಮಾತಾಡಿದ ಪರಿಣಾಮವಾಗಿ ಮುನಿಸು ಅಂತ್ಯಕಂಡಿದೆ. ಇಂದು ಬೆಳ್ಳಂಬೆಳಗ್ಗೆಯೇ ಡಾ ಸುಧಾಕರ್ ಬೋಕೆಯೊಂದಿಗೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆ ಕದ ತಟ್ಟಿದರು. ಉಭಯ ನಾಯಕರ ನಡುವೆ ಮಾತುಕತೆಯ ಉಪಹಾರ ಸೇವೆನೆಯೂ ನಡೆಯಿತು. ಕೆಲ ಸ್ಥಳೀಯ ನಾಯಕರು ಸಹ ಅವರೊಂದಿಗಿದ್ದರು. ವಿಶ್ವನಾಥ್ ಜೊತೆ ಮಾತಾಡಿದ ಬಳಿಕ ಸುಧಾಕರ್ ಈಗ ನಿರಾಳರಾಗಿರಬೇಕು, ಯಾಕೆಂದರೆ ಬಿಜೆಪಿ ಶಾಸಕ ಯಲಹಂಕ ಭಾಗದಲ್ಲಿ ಅತ್ಯಂತ ಪ್ರಭಾವಿ ಜನನಾಯಕ ಎನಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾ ಕೆ ಸುಧಾಕರ್ ವಿರುದ್ಧ ಹೆಚ್ಚಿದ ವಿರೋಧ, ನೆಲಮಂಗಲ ಮತ್ತು ಯಲಹಂಕದಲ್ಲಿ ಗೋ ಬ್ಯಾಕ್ ಸುಧಾಕರ್ ಅಭಿಯಾನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

