ಕಳೆದ ಹತ್ತು ವರ್ಷಗಳಿಂದ ಜನಸಂಪರ್ಕದಲ್ಲಿರುವ ನನ್ನನ್ನು ಜನ ಗುರುತಿಸುತ್ತಿದ್ದಾರೆ: ಯದುವಿರ್ ಕೃಷ್ಣದತ್ ಒಡೆಯರ್

ಕಳೆದ ಹತ್ತು ವರ್ಷಗಳಿಂದ ಜನಸಂಪರ್ಕದಲ್ಲಿರುವ ನನ್ನನ್ನು ಜನ ಗುರುತಿಸುತ್ತಿದ್ದಾರೆ: ಯದುವಿರ್ ಕೃಷ್ಣದತ್ ಒಡೆಯರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 11:05 AM

ಯದುವೀರ್ ಅವರನ್ನು ತಾನೇ ನೋಡಿಲ್ಲ ಇನ್ನು ಜನ ಅವರನ್ನು ಗುರುತಿಸುವುದು ಎಲ್ಲಿಂದ ಬಂತು ಅಂತ ಸಚಿವ ಕೆ ವೆಂಕಟೇಶ್ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಯುದವೀರ್, ಕಳೆದ 9-10 ವರ್ಷಗಳಿಂದ ಜನರ ನಡುವೆ ತಾನು ಓಡಾಡುತ್ತಿದ್ದು ಜನ ತಮ್ಮನ್ನು ಗುರುತಿಸುತ್ತಾರೆಯೋ ಇಲ್ಲವೋ ಅನ್ನೋದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.

ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಇಂದು ನಾಮಪತ್ರ ಸಲ್ಲಿಸಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra), ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಅವರನ್ನು ಜೊತೆಗೂಡಲಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊದಿಗೆ ಮಾತಾಡಿದ ಯದುವೀರ್, ಚುನಾವಣಾ ಪ್ರಚಾರದಲ್ಲಿ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಅದರ್ಶಮಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದರೆ ಚುನಾವಣೆಗೊಂದು ಘನತೆ ಬರುತ್ತದೆ ಎಂದು ಹೇಳಿದರು. ಯದುವೀರ್ ಅವರನ್ನು ತಾನೇ ನೋಡಿಲ್ಲ ಇನ್ನು ಜನ ಅವರನ್ನು ಗುರುತಿಸುವುದು ಎಲ್ಲಿಂದ ಬಂತು ಅಂತ ಸಚಿವ ಕೆ ವೆಂಕಟೇಶ್ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಯುದವೀರ್, ಕಳೆದ 9-10 ವರ್ಷಗಳಿಂದ ಜನರ ನಡುವೆ ತಾನು ಓಡಾಡುತ್ತಿದ್ದು ಜನ ತಮ್ಮನ್ನು ಗುರುತಿಸುತ್ತಾರೆಯೋ ಇಲ್ಲವೋ ಅನ್ನೋದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು. ಪ್ರತಾಪ್ ಸಿಂಹಗೆ ದೇವೇಗೌಡರು ಟಿಕೆಟ್ ತಪ್ಪಿಸಿದ್ದಾರೆ ಅಂತ ಹಬ್ಬಿರುವ ಸುದ್ದಿ ಆಧಾರರಹಿತ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂಪರ್ಕದಲ್ಲಿರುವ ಪ್ರತಾಪ್ ಸಿಂಹ ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿದ್ದಾರೆ: ಯದುವೀರ್ ಕೃಷ್ಣದತ್ ಒಡೆಯರ್