Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ನಾಮಬಲ ಮತ್ತು ನನ್ನ ಅಭಿವೃದ್ಧಿ ಕಾರ್ಯಗಳು ಸುಲಭ ಗೆಲುವು ದಕ್ಕಿಸಲಿವೆ: ಡಾ ಕೆ ಸುಧಾಕರ್

ಪ್ರಧಾನಿ ಮೋದಿ ನಾಮಬಲ ಮತ್ತು ನನ್ನ ಅಭಿವೃದ್ಧಿ ಕಾರ್ಯಗಳು ಸುಲಭ ಗೆಲುವು ದಕ್ಕಿಸಲಿವೆ: ಡಾ ಕೆ ಸುಧಾಕರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2024 | 7:13 PM

ವಿಕಸಿತ ಚಿಕ್ಕಬಳ್ಳಾಪುರಕ್ಕಾಗಿ ಸ್ಥಳೀಯ ವ್ಯಕ್ತಿ ಹೆಚ್ಚು ಅರ್ಹನೋ ಅಥವಾ ಹೊರಗಿನವರೋ ಅಂತ ಪ್ರಜ್ಞಾವಂತ ಮತದಾರ ಯೋಚನೆ ಮಾಡುತ್ತಾನೆ ಎಂದು ಸುಧಾಕರ್ ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಸುಧಾಕರ್, ಕಳೆದ ಎರಡು ತಿಂಗಳುಗಳಿಂದ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿ ಅಂತ ಹೇಳಿಕೊಂಡು ತಿರುಗುತ್ತಿದ್ದರು, ಪಕ್ಷ ಆವರಿಗೆ ಯಾಕೆ ಟಿಕೆಟ್ ಕೊಡಲಿಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಾಜಿ ಸಚಿವ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (Dr K Sudhakar) ಚುನಾವಣೆಯಲ್ಲಿ ಸುಲಭ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ವಾತಾವರಣ ಸಂಪೂರ್ಣವಾಗಿ ಬಿಜೆಪಿ ಪರವಾಗಿದೆ. ಹಿಂದೆ ತಾನು ಚಿಕ್ಕಬಳ್ಳಾಪುರದ ಉಸ್ತುವಾರಿ ಸಚಿವನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ತನ್ನ ಕೈಹಿಡಿಯಲಿವೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಜನರಲ್ಲಿ ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉತ್ಕಟ ಬಯಕೆ ಇದೆ ಎಂದ ಸುಧಾಕರ್, ತಮ್ಮ ಪ್ರತಿಸ್ಪರ್ಧಿ (opponent) ರಾಜಕೀಯಕ್ಕೆ ಮತ್ತು ಚಿಕ್ಕಬಳ್ಳಾಪುರಕ್ಕೆ ಹೊಸಬರಾಗಿರುವುದರಿಂದ ತನ್ನ ಗೆಲುವು ಸುಲಭವಾಗಲಿದೆ ಎಂದರು. ವಿಕಸಿತ ಚಿಕ್ಕಬಳ್ಳಾಪುರಕ್ಕಾಗಿ ಸ್ಥಳೀಯ ವ್ಯಕ್ತಿ ಹೆಚ್ಚು ಅರ್ಹನೋ ಅಥವಾ ಹೊರಗಿನವರೋ ಅಂತ ಪ್ರಜ್ಞಾವಂತ ಮತದಾರ ಯೋಚನೆ ಮಾಡುತ್ತಾನೆ ಎಂದು ಸುಧಾಕರ್ ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಸುಧಾಕರ್, ಕಳೆದ ಎರಡು ತಿಂಗಳುಗಳಿಂದ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿ ಅಂತ ಹೇಳಿಕೊಂಡು ತಿರುಗುತ್ತಿದ್ದರು, ಪಕ್ಷ ಆವರಿಗೆ ಯಾಕೆ ಟಿಕೆಟ್ ಕೊಡಲಿಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರದೀಪ್ ಈಶ್ವರ್​ರನ್ನು ಪರೋಕ್ಷವಾಗಿ ಅಯೋಗ್ಯ ಎಂದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್