ಪ್ರದೀಪ್ ಈಶ್ವರ್​ರನ್ನು ಪರೋಕ್ಷವಾಗಿ ಅಯೋಗ್ಯ ಎಂದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್

ಇವತ್ತು ದೇವನಹಳ್ಳಿಯಲ್ಲಿದ್ದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರದೀಪ್ ಈಶ್ವರ್ ಮಾಡುತ್ತಿರುವ ಕಾಮೆಂಟ್ ಗಳ ಬಗ್ಗೆ ಕೇಳಿದಾಗ ಅವರು ಕೂಲಾಗಿ, ಯೋಗ್ಯರು ಯಾರಾದರೂ ಕಾಮೆಂಟ್ ಮಾಡಿದ್ದರೆ ಹೇಳಿ ಪ್ರತಿಕ್ರಿಯೆ ನೀಡುತ್ತೇನೆ, ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ, ಒಳ್ಳೆಯ ಮಾತಾಡೋಣ ಅಂತ ಹೇಳಿದರು

ಪ್ರದೀಪ್ ಈಶ್ವರ್​ರನ್ನು ಪರೋಕ್ಷವಾಗಿ ಅಯೋಗ್ಯ ಎಂದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್
|

Updated on: Mar 26, 2024 | 2:33 PM

ದೇವನಹಳ್ಳಿ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಅದೇ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (Dr K Sudhakar) ನಡುವೆ ಇರುವ ಜಗಳ, ಕಾದಾಟಕ್ಕೆ ಒಂದು ವರ್ಷದ ಆಯಸ್ಸಿರಬಹುದು. ವಿಧಾನಸಭಾ ಚುನಾವಣೆಯಲ್ಲಿ (Assembly Polls) ಅವರು ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿದಾಗ ಶುರುವಾದ ಕಲಹ ಈಗಲೂ ಮುಂದುವರಿದಿದೆ. ಸುಧಾಕರ್ ಗೆ ಬಿಜೆಪಿ ಟಿಕೆಟ್ ನೀಡಿದ ಬಳಿಕ ಅವರನ್ನು ತೆಗಳಲೆಂದೇ ಪ್ರದೀಪ್ ಎರಡು ಬಾರಿ ಸುದ್ದಿಗೋಷ್ಟಿ ನಡೆಸಿದರು. ಅವರು ಏನು ಮಾತಾಡಿದರೆನ್ನುವುದನ್ನು ನಾವು ವರದಿ ಮಾಡಿದ್ದೇವೆ. ಈಶ್ವರ್ ವಾಗ್ದಾಳಿಯಿಂದ ವಿಚಲಿತರಾಗದ, ತಲೆಕೆಡಿಸಿಕೊಳ್ಳದ ಸುಧಾಕರ್ ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಇವತ್ತು ದೇವನಹಳ್ಳಿಯಲ್ಲಿದ್ದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರದೀಪ್ ಈಶ್ವರ್ ಮಾಡುತ್ತಿರುವ ಕಾಮೆಂಟ್ ಗಳ ಬಗ್ಗೆ ಕೇಳಿದಾಗ ಅವರು ಕೂಲಾಗಿ, ಯೋಗ್ಯರು ಯಾರಾದರೂ ಕಾಮೆಂಟ್ ಮಾಡಿದ್ದರೆ ಹೇಳಿ ಪ್ರತಿಕ್ರಿಯೆ ನೀಡುತ್ತೇನೆ, ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ, ಒಳ್ಳೆಯ ಮಾತಾಡೋಣ ಅಂತ ಹೇಳಿದರು. ಅದು ಸರಿ, ಆದರೆ ಸುಧಾಕರ್ ಗೆ ಇರುವ ಪ್ರಮುಖ ತೊಂದರೆ, ಅಡಚಣೆ ಎಂದರೆ ಅವರದ್ದೇ ಪಕ್ಷದ ಕಾರ್ಯಕರ್ತರು. ಹಲವಾರು ಕಡೆ ಕಾರ್ಯಕರ್ತರು ಗೋ ಬ್ಯಾಕ್ ಸುಧಾಕರ್ ಅಭಿಯಾನ ಶುರುಮಾಡಿದ್ದಾರೆ, ಅವರನ್ನು ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸುಧಾಕರ್ ಮುಂದಿರುವ ದೊಡ್ಡ ಸವಾಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಯಾವುದೇ ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ? ಪ್ರದೀಪ್ ಈಶ್ವರ್ ಸವಾಲ್

Follow us