ಹೇಮಾವತಿ ನದಿ ನಮ್ಮದು, ಜೀವ ಕೊಟ್ಟೇವು ಆದರೆ ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ರೈತರಿಗೆ ವಿಷವುಣ್ಣಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೆನಾಲ್ ಯೋಜನೆ ಬೇಡವೆಂದು ರೈತರು ಗೋಗರೆದರೂ ಅವರ ಅಳಲನ್ನು ತಿರಸ್ಕರಿಸಲಾಗಿದೆ. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಎರಡೂ ಇಲ್ಲ, ಅವೆರಡನ್ನು ತೆರೆಸುವ ಪ್ರಯತ್ನವನ್ನು ಇವತ್ತಿನ ಪ್ರತಿಭಟನೆಯ ಮೂಲಕ ಮಾಡುತ್ತಿದ್ದೇವೆ. ಜೀವವಾದರೂ ಕೊಟ್ಟೇವು ಆದರೆ ಯಾವ ಕಾರಣಕ್ಕೂ ನೀರು ಮಾತ್ರ ಬಿಡಲ್ಲ ಎಂದು ಹೇಳಿದರು.
ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ (Hemavati Express Link Canal Project) ಬಗ್ಗೆ ಜಿಲ್ಲೆಯ ಜನರ ಅಸಮಾಧಾನ ಮತ್ತು ಆಕ್ರೋಶ ಮೊದಲಿಂದಲೂ ಇತ್ತು. ವಿಷಯ ಪುನಃ ಮುನ್ನೆಲೆಗೆ ಬಂದು ಕೆನಾಲ್ ಯೋಜನೆಯ ಕಾಮಗಾರಿ (project works) ಆರಂಭಗೊಳ್ಳುತ್ತಿದ್ದಂತೆಯೇ ಹೇಮಾವತಿ ಹೋರಾಟ ಸಮಿತಿ, ಪ್ರಗತಿಪರ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು (pro Kannada organizations), ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಜಿಲ್ಲಾ ಘಟಕಗಳು ಇಂದು ಜಿಲ್ಲೆಯಾದ್ಯಂತ ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನನೆಕಾರರ ಪರವಾಗಿ ಟಿವಿ9 ತುಮಕೂರು ಪ್ರತಿನಿಧಿಯೊಂದಿಗೆ ಮಾತಾಡಿದ ರೈತ ಮುಖಂಡರೊಬ್ಬರು, ಹೇಮಾವತಿ ನೀರನ್ನು ಮಾಗಡಿ ಮತ್ತು ಕನಕಪುರಕ್ಕೆ ಕೊಂಡೊಯ್ಯುವ ಹುನ್ನಾರ ನಡೆಯುತ್ತಿದೆ, ರೈತರಿಗೆ ವಿಷವುಣ್ಣಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೆನಾಲ್ ಯೋಜನೆ ಬೇಡವೆಂದು ರೈತರು ಗೋಗರೆದರೂ ಅವರ ಅಳಲನ್ನು ತಿರಸ್ಕರಿಸಲಾಗಿದೆ. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಎರಡೂ ಇಲ್ಲ, ಅವೆರಡನ್ನು ತೆರೆಸುವ ಪ್ರಯತ್ನವನ್ನು ಇವತ್ತಿನ ಪ್ರತಿಭಟನೆಯ ಮೂಲಕ ಮಾಡುತ್ತಿದ್ದೇವೆ. ಜೀವವಾದರೂ ಕೊಟ್ಟೇವು ಆದರೆ ಯಾವ ಕಾರಣಕ್ಕೂ ನೀರು ಮಾತ್ರ ಬಿಡಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ: ಕಾರಣವೇನು?