ಯುವಕನ ಮೇಲೆ ಲೈಂಗಿಕ ಅತ್ಯಾಚಾರ ನಡೆದ ಸ್ಥಳ ಎನ್ನಲಾಗುತ್ತಿರುವ ಸೂರಜ್ ರೇವಣ್ಣ ಫಾರ್ಮ್ ಹೌಸ್ ದೃಶ್ಯಗಳು ಲಭ್ಯ

|

Updated on: Jun 22, 2024 | 5:26 PM

ಅಂದಹಾಗೆ, ತನ್ನ ಮೇಲೆ ಅತ್ಯಾಚಾರ ನಡೆದಿದ್ದು ಜೂನ್ 16ರಂದು ಅಂತ ಯುವಕ ಹೇಳಿಕೊಂಡಿದ್ದಾನೆ. ಆದರೆ, ಯುವಕ ₹ 5 ಕೋಟಿ ಬೇಡಿಕೆಯನ್ನು ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಅಂತ ಸೂರಜ್ ಆಪ್ತ ಶಿವಕುಮಾರ್ ದಾಖಲಿಸಿರುವ ದೂರಿನ ಮೇರೆಗೆ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವಕನ ದೂರಿನನ್ವಯ ಇದುವರೆಗೆ ಪ್ರಕರಣ ದಾಖಲಾಗಿಲ್ಲ

ಹಾಸನ: ರಾಜ್ಯದಾದ್ಯಂತ ಇಲ್ಲಿ ಕಾಣುತ್ತಿರುವ ಫಾರ್ಮ್ ಹೌಸ್ ಚರ್ಚೆಯಲ್ಲಿದೆ. ಹಾಸನದ ಟಿವಿ9 ವರದಿಗಾರ ತೋಟದ ಮನೆ ಮತ್ತು ಅಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅನೈಸರ್ಗಿಕ ಲೈಂಗಿಕ ದುರಾಚಾರದ (sodomy) ಬಗ್ಗೆ ಸಾಕಷ್ಟು ಮಾಹಿತಿ ಈ ವಿಡಿಯೋನಲ್ಲಿ ನೀಡಿದ್ದಾರೆ. ಈ ತೋಟದ ಮನೆಯು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗನ್ನಿಕಡ (Gannikada) ಗ್ರಾಮದಲ್ಲಿದೆ ಮತ್ತು ಇದು ಯುವಕನ ಮೇಲೆ ಅನೈಸರ್ಗಿನ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣಗೆ (Dr Suraj Revanna) ಸೇರಿದ್ದು ಅಂತ ವರದಿಗಾರ ಹೇಳುತ್ತಾರೆ. ಆಫ್ ಕೋರ್ಸ್, ಸದ್ಯಕ್ಕಂತೂ ಒಳಗಡೆ ಹೋಗುವ ಅನುಮತಿ ಯಾರಿಗೂ ಸಿಗಲಾರದು ಆದರೆ ಒಳಭಾಗದಲ್ಲಿ ಕಾಣಿಸುತ್ತಿರುವ ಕಾರು ಸೂರಜ್ ಅವರದ್ದಂತೆ. ಅಂದರೆ ಅವರು ಇಲ್ಲೇ ಇದ್ದಾರೆಯೇ? ಗೊತ್ತಿಲ್ಲ ಎನ್ನುತ್ತಾರೆ ವರದಿಗಾರ. ಮೊಬೈಲ್ ಗೆ ಕಾಲ್ ಮಾಡಿದರೆ ಸೂರಜ್ ಉತ್ತರಿಸಿಲ್ಲವಂತೆ. ಅಂದಹಾಗೆ, ತನ್ನ ಮೇಲೆ ಅತ್ಯಾಚಾರ ನಡೆದಿದ್ದು ಜೂನ್ 16ರಂದು ಅಂತ ಯುವಕ ಹೇಳಿಕೊಂಡಿದ್ದಾನೆ. ಆದರೆ, ಯುವಕ ₹ 5 ಕೋಟಿ ಬೇಡಿಕೆಯನ್ನು ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಅಂತ ಸೂರಜ್ ಆಪ್ತ ಶಿವಕುಮಾರ್ ದಾಖಲಿಸಿರುವ ದೂರಿನ ಮೇರೆಗೆ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವಕನ ದೂರಿನನ್ವಯ ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಪವರ್ ಗೇಮ್ ಶುರುವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅವಸರದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದ ಹೆಚ್ ಡಿ ಕುಮಾರಸ್ವಾಮಿ, ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಸಿಡುಕಿದರು!

Follow us on